ಕರ್ನಾಟಕ

karnataka

ETV Bharat / state

ಹೀಗಿದೆ ನೈಋತ್ಯ ರೈಲ್ವೆ ಇಲಾಖೆಯ ವಾರ್ಷಿಕ ಬಜೆಟ್ - southwest railway

ನೈಋತ್ಯ ರೈಲ್ವೆ ಇಲಾಖೆಯು 2020-21ನೇ ಸಾಲಿನ ವಾರ್ಷಿಕ ಬಜೆಟ್ ಮಂಡಿಸಿದ್ದು, ರೈಲ್ವೆ ಸೇವೆಯನ್ನು ಇನ್ನಷ್ಟು ಮೇಲ್ದರ್ಜೆಗೆ ಏರಿಸುವ ಹಾಗೂ ದ್ವಿಪಥ ಕಾಮಗಾರಿಗೆ ಹೆಚ್ಚಿನ ಆದ್ಯತೆ ‌ನೀಡಿದೆ.

Annual Budget for the Southwest Railway Department 2020-21
ನೈಋತ್ಯ ರೈಲ್ವೇ ಇಲಾಖೆಯ 2020-21ನೇ ಸಾಲಿನ ವಾರ್ಷಿಕ ಬಜೆಟ್

By

Published : Feb 6, 2020, 8:32 AM IST

Updated : Feb 6, 2020, 9:29 AM IST

ಹುಬ್ಬಳ್ಳಿ:ನೈಋತ್ಯ ರೈಲ್ವೆ ಇಲಾಖೆ 2020-21ನೇ ಸಾಲಿನ ವಾರ್ಷಿಕ ಬಜೆಟ್ ಮಂಡಿಸಿದ್ದು, ಒಟ್ಟು 3,495 ಕೋಟಿ ರೂ. ಮೊತ್ತದ ಬಜೆಟ್ ಮಂಡನೆಯಾಗಿದೆ.

ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ನೀಡುವ ಸದುದ್ದೇಶದಿಂದ ಹೊಸ-ಹೊಸ ಯೋಜನೆ ಹಾಗೂ ಮೇಲ್ದರ್ಜೆಗೆ ಏರಿಸಲು ಚಿಂತನೆ ನಡೆಸಲಾಗಿದೆ. ರೈಲ್ವೆ ಸೇವೆಯನ್ನು ಇನ್ನಷ್ಟು ಮೇಲ್ದರ್ಜೆಗೆ ಏರಿಸುವ ಹಾಗೂ ದ್ವಿಪಥ ಕಾಮಗಾರಿಗೆ ಹೆಚ್ಚಿನ ಆದ್ಯತೆ ‌ನೀಡಿದೆ.

ನೈಋತ್ಯ ರೈಲ್ವೇ ಇಲಾಖೆಯ 2020-21ನೇ ಸಾಲಿನ ವಾರ್ಷಿಕ ಬಜೆಟ್

ಹೊಸ ಲೈನ್ಸ್​ಗೆ 226.15 ಕೋಟಿ, ದ್ವಿಗುಣಗೊಳಿಸುವಿಕೆ(ಡಬ್ಲಿಂಗ್)ಗೆ 85.40 ಕೋಟಿ, ಸಂಚಾರ ಸೌಲಭ್ಯಗಳಿಗೆ 53. 21 ಕೋಟಿ, ರೋಲಿಂಗ್ ಸ್ಟಾಕ್ 54.29 ಕೋಟಿ, ರಸ್ತೆ ಸುರಕ್ಷತಾ ಕಾರ್ಯಗಳು -ಲೆವೆಲ್ ಕ್ರಾಸಿಂಗ್​​ 21.30 ಕೋಟಿ, ಸೇಫ್ಟಿ ರೋಡ್ ಓವರ್ / ಅಂಡರ್ ಬ್ರಿಡ್ಜಸ್ 158.31 ಕೋಟಿ, ಟ್ರ್ಯಾಕ್ ನವೀಕರಣಗಳಿಗೆ 410.32 ಕೋಟಿ, ಸೇತುವೆ ಕೆಲಸಕ್ಕೆ 20.33ಕೋಟಿ, ಸಿಗ್ನಲ್ ಮತ್ತು ದೂರಸಂಪರ್ಕ ಕಾರ್ಯಗಳಿಗೆ 23.36ಕೋಟಿ, ಇತರ ವಿದ್ಯುತ್ ಕಾರ್ಯಕ್ಕೆ 5. 41ಕೋಟಿ, ಯಂತ್ರೋಪಕರಣಗಳು ಮತ್ತು ಸಸ್ಯ 24. 42 ಕೋಟಿ, ಕಾರ್ಯಾಗಾರ ಮತ್ತು ಉತ್ಪನ್ನ ಘಟಕಗಳಿಗೆ 70.51 ಕೋಟಿ, ಸಿಬ್ಬಂದಿ ಕಲ್ಯಾಣ 14.53ಕೋಟಿ, ಪ್ರಯಾಣಿಕರ ಸೌಲಭ್ಯಗಳು 122.64 ಕೋಟಿ. ಇತರೆ ನಿರ್ದಿಷ್ಟಪಡಿಸಿದ ಕಾರ್ಯಗಳು 31.65ಕೋಟಿ, ತರಬೇತಿ / ಎಚ್‌ಆರ್‌ಡಿ 5.81ಕೋಟಿ ಅನುದಾನವನ್ನು ನೀಡಲಾಗಿದೆ.

ಎಸ್‌ಡಬ್ಲ್ಯುಆರ್ ಒಟ್ಟು ರೂ 2,709 ಹಾಗೂ ಸಿಆರ್ (ಬಂಡವಾಳ ಮತ್ತು ಇಬಿಆರ್ (ಐಎಫ್) ಸೇರಿದಂತೆ ಇತ್ಯಾದಿಗಳನ್ನು ಪಡೆದುಕೊಂಡಿದ್ದು, ಇದು ವಲಯ ರಚನೆಯ ನಂತರ ಇದುವರೆಗಿನ ಅತಿ ಹೆಚ್ಚು ಅನುದಾನವಾಗಿದೆ. ಒಟ್ಟು 3,495 ಕೋಟಿ ವಾರ್ಷಿಕ ಆಯವ್ಯಯದ ಲೆಕ್ಕಾಚಾರವನ್ನು ನೈಋತ್ಯ ರೈಲ್ವೆ ಇಲಾಖೆ ತಿಳಿಸಿದೆ.

ನೈಋತ್ಯ ರೈಲ್ವೆ ಇಲಾಖೆಯ 2020-21ನೇ ಸಾಲಿನ ವಾರ್ಷಿಕ ಬಜೆಟ್
Last Updated : Feb 6, 2020, 9:29 AM IST

ABOUT THE AUTHOR

...view details