ಕರ್ನಾಟಕ

karnataka

ETV Bharat / state

ಅಣ್ಣಿಗೇರಿ ಪುರಸಭೆ: 12 ಸ್ಥಾನಗಳಲ್ಲಿ ಕಾಂಗ್ರೆಸ್ ಜಯ.. ಬಿಜೆಪಿಗೆ ಭಾರಿ ಮುಖಭಂಗ

ಅಣ್ಣಿಗೇರಿ ಪುರಸಭೆಯಲ್ಲಿ 23 ಸ್ಥಾನಗಳ ಪೈಕಿ 12 ರಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಉಳಿದಂತೆ ಬಿಜೆಪಿ 5 ಹಾಗೂ ಪಕ್ಷೇತರರು 5 ಮತ್ತು ಜನತಾ ಪಕ್ಷ 1 ರಲ್ಲಿ‌ ಜಯಗಳಿಸಿದೆ. ಇದರಿಂದ ಬಿಜೆಪಿ ಪಕ್ಷಕ್ಕೆ ಬಾರೀ‌ ಮುಖಭಂಗವಾಗಿದೆ.

annigeri
ಅಣ್ಣಿಗೇರಿ

By

Published : Dec 30, 2021, 3:41 PM IST

ಧಾರವಾಡ: ಜಿಲ್ಲೆಯ ಅಣ್ಣಿಗೇರಿ ಪುರಸಭೆ ಚುನಾವಣೆ ಮತ ಎಣಿಕೆ ಮುಕ್ತಾಯಗೊಂಡಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿ ‌ಬಿಜೆಪಿ ಹಿನ್ನಡೆ ಅನುಭವಿಸಿದೆ. ಕಾಂಗ್ರೆಸ್ ಹೆಚ್ಚಿನ ಸ್ಥಾನಗಳಿಸಿ ಮೊದಲ ಸ್ಥಾನ ಪಡೆದುಕೊಂಡಿದೆ. ಅಣ್ಣಿಗೇರಿ ಪುರಸಭೆಯಲ್ಲಿ 23 ಸ್ಥಾನಗಳ ಪೈಕಿ 12 ರಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಉಳಿದಂತೆ ಬಿಜೆಪಿ 5 ಹಾಗೂ ಪಕ್ಷೇತರರು 5 ಮತ್ತು ಜನತಾ ಪಕ್ಷ 1 ರಲ್ಲಿ‌ ಜಯಗಳಿಸಿದೆ. ಇದರಿಂದ ಬಿಜೆಪಿ ಪಕ್ಷಕ್ಕೆ ಭಾರಿ ಮುಖಭಂಗವಾಗಿದೆ.

ಅಣ್ಣಿಗೇರಿ ಪುರಸಭೆ ಫಲಿತಾಂಶ ಪ್ರಕಟ

12 ಸ್ಥಾನಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿರುವ ಕಾಂಗ್ರೆಸ್ ಪುರಸಭೆ ಅಧಿಕಾರ ಹಿಡಿಯುವತ್ತ ಚಿತ್ತ ನೆಟ್ಟಿದೆ. ಉಳಿದಂತೆ ಜೆಡಿಎಸ್ ಖಾತೆ ತೆರೆಯದೇ ಸೋಲೊಪ್ಪಿಕೊಂಡಿದೆ.

ಪುರಸಭೆ ಚುನಾವಣೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ಹಾಗೂ ಸಚಿವ ಶಂಕರ ಪಾಟೀಲ್​ ಮುನೇನಕೊಪ್ಪ ಅವರು ಪಕ್ಷದ ಅಭ್ಯರ್ಥಿಗಳ ಪರವಾಗಿ ಮತ ಭೇಟಿ ನಡೆಸಿದ್ದರು. ಆದರೆ, ಮತದಾರರು ಕಾಂಗ್ರೆಸ್ ಅಧಿವೇಶನದಲ್ಲಿ ಪಕ್ಷಕ್ಕೆ ಹೆಚ್ಚಿನ ಸ್ಥಾನ ನೀಡಿದ್ದಾರೆ.

ಓದಿ:2021ರಲ್ಲಿ ನಡೆದ ಉಪ ಚುನಾವಣೆಗಳಲ್ಲಿ ಯಾವ ಪಕ್ಷಕ್ಕೆ ಸಿಹಿ - ಕಹಿ ಅನುಭವ

ABOUT THE AUTHOR

...view details