ಕರ್ನಾಟಕ

karnataka

ETV Bharat / state

ಜನಸ್ನೇಹಿ ಜೊತೆಗೆ ಪರಿಸರಸ್ನೇಹಿಯಾಗಿದೆ ಅಣ್ಣಿಗೇರಿ ಪೊಲೀಸ್ ಠಾಣೆ

ಇಲ್ಲಿ ಹತ್ತು ಹಲವು ಬಗೆಯ ಹೂವುಗಳು, ಕುಳಿತುಕೊಳ್ಳಲು ಉತ್ತಮ ಆಸನದ ವ್ಯವಸ್ಥೆ ಇದೆ. ಠಾಣೆಗೆ ಪಿಎಸ್ಐ ಆಗಿ ಬಂದಿರುವ ಎಲ್.ಕೆ. ಜುಲಕಟ್ಟಿ ತಮ್ಮ ಠಾಣೆಯ ಸುತ್ತಲೂ ಉದ್ಯಾನವನ ನಿರ್ಮಾಣ ಮಾಡಿಸುವ ಮುತುವರ್ಜಿ ವಹಿಸಿದ್ದಾರೆ. ಈ ಮೂಲಕ ಠಾಣೆಗೆ ಬರುವ ಜನಸಾಮಾನ್ಯರ ಮೊಗದಲ್ಲಿ ಭಯ, ಆತಂಕದ ಹೊರತಾಗಿ ನಗು ಚಿಮ್ಮುವಂತೆ ಮಾಡಿದ್ದಾರೆ.

Annegeri Police Station is known as eco-friendly station
ಪರಿಸರ ಸ್ನೇಹಿ ಠಾಣೆ ಎಂಬ ಹೆಗ್ಗಳಿಗೆ ಪಾತ್ರವಾದ ಅಣ್ಣಿಗೇರಿ ಪೊಲೀಸ್ ಠಾಣೆ

By

Published : Oct 16, 2020, 4:40 PM IST

ಹುಬ್ಬಳ್ಳಿ: ಪೊಲೀಸ್ ಠಾಣೆ ಅಂದ್ರೆ ಜನಸಾಮಾನ್ಯರಲ್ಲಿ ಭಯ ಇರುತ್ತೆ. ಆದ್ರೆ, ಅಣ್ಣಿಗೇರಿ ಪೊಲೀಸ್ ಠಾಣೆ ಜನಸ್ನೇಹಿಯಾಗುವುದರ ಜೊತೆಗೆ ಪರಿಸರ ಕಾಳಜಿ ಪ್ರದರ್ಶಿಸಿದೆ. ಈ ಮೂಲಕ‌ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

ಅಣ್ಣಿಗೇರಿ ಪೊಲೀಸ್ ಠಾಣೆಯ ಸೌಂದರ್ಯ

ಈ ಠಾಣೆಯ ಆವರಣ ನೋಡುತ್ತಿದ್ದರೆ ಎಂಥವರಿಗೂ ಖುಷಿಯಾಗದಿರದು. ಏಕೆಂದರೆ, ಬಗೆ ಬಗೆ ಹೂವಿನ ಕಂಪು, ಹಚ್ಚ ಹಸುರಿನ ವಾತಾವರಣ, ಜೊತೆಗೆ ಸ್ವಚ್ಛಂದ ಪರಿಸರವನ್ನು ನೀವಿಲ್ಲಿ ಕಾಣಬಹುದು. ಹಾಗಾಗಿ ಅಣ್ಣಿಗೇರಿ ಪೊಲೀಸ್ ಠಾಣೆ ಒಂದು ಉದ್ಯಾನವನದ ಮಾದರಿಯಲ್ಲಿ ಗೋಚರವಾಗುತ್ತದೆ.

ಇಲ್ಲಿ ಹತ್ತು ಹಲವು ಬಗೆಯ ಹೂವುಗಳು, ಕುಳಿತುಕೊಳ್ಳಲು ಉತ್ತಮ ಆಸನದ ವ್ಯವಸ್ಥೆಯೂ ಇದೆ. ಠಾಣೆಗೆ ಪಿಎಸ್ಐ ಆಗಿ ಬಂದಿರುವ ಎಲ್.ಕೆ. ಜುಲಕಟ್ಟಿ ತಮ್ಮ ಠಾಣೆಯ ಸುತ್ತಲೂ ಉದ್ಯಾನವನ ನಿರ್ಮಾಣ ಮಾಡಿಸುವ ಮುತುವರ್ಜಿ ವಹಿಸಿದ್ದಾರೆ. ಈ ಮೂಲಕ ಠಾಣೆಗೆ ಬರುವ ಜನಸಾಮಾನ್ಯರ ಮೊಗದಲ್ಲಿ ಭಯ, ಆತಂಕದ ಹೊರತಾಗಿ ನಗು ಚಿಮ್ಮುವಂತೆ ಮಾಡಿದ್ದಾರೆ.

ABOUT THE AUTHOR

...view details