ಧಾರವಾಡ: ಭೂಮಿ ಅಗೆಯುವಾಗ ತಾಲೂಕಿನ ಕೊಟಬಾಗಿ ಗ್ರಾಮದಲ್ಲಿ ವಿಗ್ರಹ ಪತ್ತೆಯಾಗಿದೆ. ಪತ್ತೆಯಾದ ವಿಗ್ರಹವನ್ನು ಚೋವೀಸ್ ತೀರ್ಥಂಕರರ ವಿಗ್ರಹ ಎಂದು ಗುರುತಿಸಲಾಗಿದೆ.
ಜೆಸಿಬಿಯಿಂದ ನೆಲ ಅಗೆಯುತ್ತಿದ್ದಾಗ ಸುಮಾರು 10 ಅಡಿ ಆಳದಲ್ಲಿ ಈ ವಿಗ್ರಹ ಪತ್ತೆಯಾಗಿದೆ. ಇದು ಸುಮಾರು 8ನೇ ಶತಮಾನದಷ್ಟು ಹಿಂದಿನದ್ದು ಇರಬಹುದೆಂದು ಅಂದಾಜಿಸಲಾಗಿದೆ. ಮುನಿಶ್ರೀ ಪ್ರಸಂಗಸಾಗರ ಮಹಾರಾಜರಿಂದ ವಿಗ್ರಹಕ್ಕೆ ಪೂಜೆ ಸಲ್ಲಿಸಲಾಗಿದೆ.