ಧಾರವಾಡ:ಆನಂದ್ ಸಿಂಗ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಹೆಚ್.ಕೋನರೆಡ್ಡಿ ಪ್ರತಿಕ್ರಿಯಿಸಿದ್ದಾರೆ.
ಆನಂದ ಸಿಂಗ್ ರಾಜೀನಾಮೆ ಬಗ್ಗೆ ಕೋನರೆಡ್ಡಿ ಪ್ರತಿಕ್ರಿಯೆ - cm kumaraswami
ಆನಂದ ಸಿಂಗ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಹೆಚ್.ಕೋನರೆಡ್ಡಿ ಪ್ರತಿಕ್ರಿಯಿಸಿ, ಮಾಧ್ಯಮಗಳ ಮೂಲಕ ನನಗೆ ಆನಂದ ಸಿಂಗ್ ಅವರ ರಾಜೀನಾಮೆ ವಿಚಾರ ತಿಳಿದಿದೆ ಎಂದಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳ ಮೂಲಕ ನನಗೆ ಆನಂದ ಸಿಂಗ್ ಅವರ ರಾಜೀನಾಮೆ ವಿಚಾರ ತಿಳಿದಿದೆ. ಮುಖ್ಯಮಂತ್ರಿಗಳು ಅಮೆರಿಕದಿಂದಲೇ ಎಲ್ಲವನ್ನು ಗಮನಿಸುತ್ತಿದ್ದಾರೆ. ಇದು ಬಿಜೆಪಿಯ ಹಗಲು ಗನಸು ಅಷ್ಟೆ. ಎಲ್ಲವನ್ನು ಕಾದು ನೋಡಬೇಕಿದೆ ಎಂದಿದ್ದಾರೆ. ನಾಲ್ಕು ದಿನಗಳಲ್ಲಿ ಸಿಎಂ ಕುಮಾರಸ್ವಾಮಿ ಕರ್ನಾಟಕಕ್ಕೆ ಬರುತ್ತಾರೆ. ಉಹಾಪೋಹಗಳಿಗೆ ಕಿವಿಗೊಡಬಾರದು ಎಂದಿದ್ದಾರೆ.
ಇನ್ನುಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅನುಭವದ ಮೂಲಕ ಕೆಲವು ಮಾತುಗಳನ್ನು ಹೇಳುತ್ತಾರೆ. ಕುಮಾರಸ್ವಾಮಿ ಅವರಿಗಿದ್ದಷ್ಟು ಅನುಭವ ಯಾರಿಗೂ ಇಲ್ಲ. ಸರ್ಕಾರದಲ್ಲಿರುವ ಗೊಂದಲವನ್ನು ಎರಡು ಪಕ್ಷಗಳ ಮುಖಂಡರು ಸೇರಿ ಎಲ್ಲವನ್ನು ಸರಿ ಮಾಡುತ್ತಾರೆ. ಭವಿಷ್ಯದ ಬಗ್ಗೆ ಏನೂ ಹೇಳೋದು ಸಾದ್ಯವಿಲ್ಲ. ಎಲ್ಲವನ್ನೂ ಕಾದು ನೋಡಬೇಕಿದೆ ಎಂದಿದ್ದಾರೆ.