ಹುಬ್ಬಳ್ಳಿ:ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರಿಗೆ ಚಾಕು ಇರಿತ ಮಾಡಿರುವ ಘಟನೆ ನಗರದ ಕಸಬಾ ಠಾಣಾ ವ್ಯಾಪ್ತಿಯ ಕೊತಂಬರಿ ಆಟೋ ಸ್ಟ್ಯಾಂಡ್ ಬಳಿ ನಡೆದಿದೆ.
ಕರ್ಜಗಿ ಓಣಿಯ ನಿವಾಸಿ ಮಹಮ್ಮದ್ ಚಾಕು ಇರಿತಕ್ಕೆ ಒಳಗಾದವರು. ಇರ್ಫಾನ್ ಚಾಕುವಿನಿಂದ ಇರಿದು ಪರಾರಿಯಾದ ಆರೋಪಿ. ನಗರದ ಕೊತ್ತಂಬರಿ ಆಟೋ ಸ್ಟ್ಯಾಂಡ್ ಬಳಿ ಮಹಮ್ಮದ್ ನಿಂತಿದ್ದಾಗ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದ ಇರ್ಫಾನ್, ಮೊಹಮ್ಮದ್ ಅವರ ಎದೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.