ಹುಬ್ಬಳ್ಳಿ:ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಮತ್ತೊಂದು ಬಲಿಯಾಗಿದ್ದು, ಸೋಂಕಿತರ ಸಾವಿನ ಸಂಖ್ಯೆ ಎರಡಕ್ಕೇರಿಕೆಯಾಗಿದೆ.
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೈರಿದೇವರಕೊಪ್ಪದ ನಿವಾಸಿ 70 ವರ್ಷದ ವೃದ್ಧ ಕೊರೊನಾ ಸೋಂಕು ತಗುಲಿ ಮೃತಪಟ್ಟಿದ್ದಾರೆ.

ಇವರ ಕುಟುಂಬಸ್ಥರಾದ ಆರು ತಿಂಗಳ ಗರ್ಭಿಣಿ ಪುತ್ರಿ ಹಾಗೂ ಮೃತನ ಪತ್ನಿಗೂ ಸೋಂಕು ದೃಢಪಟ್ಟಿದ್ದು, ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮುಂಬೈನಿಂದ ಬರುವಾಗಲೇ ಅನಾರೋಗ್ಯದಿಂದ ವೃದ್ಧ ಬಳಲುತ್ತಿದ್ದರು. ಬಳಿಕ ಕಿಮ್ಸ್ ಆಸ್ಪತ್ರೆಗೆ ಬಂದು ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಕುರಿತು ಸರ್ಕಾರದ ಹೆಲ್ತ್ ಬುಲೆಟ್ನಲ್ಲಿ ಅಧಿಕೃತ ಮಾಹಿತಿ ಬರುವುದು ಬಾಕಿ ಇದೆ.