ಕರ್ನಾಟಕ

karnataka

ETV Bharat / state

ಚಿಕ್ಕ ಮಕ್ಕಳ ಆಸ್ಪತ್ರೆಗೆ ಸೋಂಕಿತ ಭೇಟಿ: ಸ್ವಯಂ ಪ್ರೇರಿತವಾಗಿ ಆಸ್ಪತ್ರೆ ಬಂದ್ - ನವಲಗುಂದ ಮಕ್ಕಳ ಆಸ್ಪತ್ರೆ ಬಂದ್ ನ್ಯೂಸ್

ಕೊರೊನಾ ಸೋಂಕಿತ ವ್ಯಕ್ತಿಯೋರ್ವ ನವಲಗುಂದ ಚಿಕ್ಕ ಮಕ್ಕಳ ಆಸ್ಪತ್ರೆಗೆ ಬಂದು ಹೋದ ಹಿನ್ನೆಲೆ ಸಿಬ್ಬಂದಿ, ವೈದ್ಯರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ.

Navalagunda
Navalagunda

By

Published : Jul 5, 2020, 1:30 PM IST

ನವಲಗುಂದ: ಕೊರೊನಾ ಸೋಂಕಿತ ವ್ಯಕ್ತಿಯೋರ್ವ ಇಲ್ಲಿನ ಚಿಕ್ಕ ಮಕ್ಕಳ ಆಸ್ಪತ್ರೆಗೆ ಬಂದು ಹೋದ ಹಿನ್ನೆಲೆ ಸಿಬ್ಬಂದಿ, ವೈದ್ಯರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದ್ದು, ಆಸ್ಪತ್ರೆಯನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಲಾಗಿದೆ.

ಮೊರಬ ಗ್ರಾಮದ ಸೋಂಕಿತ ವ್ಯಕ್ತಿಯ ಸಂಪರ್ಕದಿಂದ ಶಿರಕೋಳದ ಗ್ರಾಮದ ಅವಿಭಕ್ತ ಕುಟುಂಬದ ವ್ಯಕ್ತಿಯೊಬ್ಬರಿಗೆ ಸೋಂಕು ತಗಲಿತ್ತು. ಶಿರಕೋಳ ಗ್ರಾಮದ ಸೋಂಕಿತನ ಮನೆಗೆ ಆರ್ ಎಂ ಪಿ ವೈದ್ಯರೊಬ್ಬರು ತೆರಳಿ ಚಿಕಿತ್ಸೆ ನೀಡಿದ್ದರು. ಅವರಿಗೂ ಸೋಂಕು ದೃಢಪಟ್ಟಿತ್ತು. ಸೋಂಕಿತ ವೈದ್ಯ ನವಲಗುಂದದ ಚಿಕ್ಕಮಕ್ಕಳ ಆಸ್ಪತ್ರೆಗೆ ಇತ್ತೀಚೆಗೆ ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಯ ವೈದ್ಯರು, ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಯನ್ನು ಸ್ಯಾನಿಟೈಸ್​ ಮಾಡಿ ಬಂದ್ ಮಾಡಿದ್ದಾರೆ. ಅಲ್ಲದೆ, ಎಲ್ಲಾ ಸಿಬ್ಬಂದಿಗೆ ಹೋಮ್ ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಿದ್ದಾರೆ.

ಆಸ್ಪತ್ರೆಯ ಸುತ್ತಮುತ್ತ ಸ್ಯಾನಿಟೈಸರ್ ಸಿಂಪಡಿಸುವ ವೇಳೆ ತಹಶೀಲ್ದಾರ್ ನವೀನ ಹುಲ್ಲೂರು, ಪುರಸಭೆ ಮುಖ್ಯಾಧಿಕಾರಿ ಎನ್.ಹೆಚ್. ಖುದಾನವರ ಹಾಗೂ ಪುರಸಭೆಯ ಸಿಬ್ಬಂದಿ ವರ್ಗದವರು ಇದ್ದರು.

ABOUT THE AUTHOR

...view details