ಕರ್ನಾಟಕ

karnataka

ETV Bharat / state

ಕೈ ಸನ್ನೆ ಮಾಡಿ ಕರೆದೊಯ್ದಳು, ಎಲ್ಲವನ್ನೂ ದೋಚಿದ್ಲು.. ಹುಬ್ಬಳ್ಳಿಯಲ್ಲಿ ಹಣ ಕಳೆದುಕೊಂಡ ಯುವಕನ ಗೋಳು

ಹುಬ್ಬಳ್ಳಿ ಹಳೇ ಬಸ್ ನಿಲ್ದಾಣದಲ್ಲಿ ನಿಂತಿದ್ದ ಮಹಿಳೆಯೊಬ್ಬಳು ಬಟ್ಟೆ ಖರೀದಿಸಲು ಮಾರುಕಟ್ಟೆಗೆ ಬಂದಿದ್ದ ಯುವಕನನ್ನು ಕೈ ಸನ್ನೆ ಮಾಡಿ ಕರೆದು, ಆಟೋದಲ್ಲಿ ಬಂಜಾರ ಕಾಲೋನಿ ಬಳಿ ಕರೆದುಕೊಂಡು ಹೋಗಿ ಸಹಚರರಿಂದ ಹಲ್ಲೆ ಮಾಡಿಸಿ ಮೊಬೈಲ್ ಹಾಗೂ ನಗದು ಕಿತ್ತುಕೊಂಡು ಪರಾರಿಯಾದ ಘಟನೆ ನಡೆದಿದೆ.

hubli
ಪೊಲೀಸ್​ ಠಾಣೆ

By

Published : Sep 25, 2021, 2:18 PM IST

Updated : Sep 25, 2021, 5:06 PM IST

ಹುಬ್ಬಳ್ಳಿ: ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣದ ಬಳಿ ನಿಂತಿದ್ದ ಮಹಿಳೆಯೊಬ್ಬಳು ಯುವಕನೊಬ್ಬನನ್ನು ಆಟೋದಲ್ಲಿ ಬಂಜಾರ ಕಾಲೋನಿ ಬಳಿ ಕರೆದುಕೊಂಡು ಹೋಗಿ ಬಳಿಕ ತನ್ನ ಸಹಚರರಿಂದ ಹಲ್ಲೆ ಮಾಡಿಸಿ, ಮೊಬೈಲ್ ಹಾಗೂ 5 ಸಾವಿರ ರೂ.‌ ನಗದು ಕಿತ್ತುಕೊಂಡು ಪರಾರಿಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಹುಬ್ಬಳ್ಳಿಯಲ್ಲಿ ವ್ಯಾಸಂಗ ಮಾಡುತ್ತಿರುವ ರಾಯಚೂರು ಮೂಲದ ಯುವಕ​ ಹಲ್ಲೆಗೊಳಗಾದವ ಎಂದು ತಿಳಿದುಬಂದಿದೆ. ಮುಜಮಿ, ವೆಂಕಟೇಶ, ಗೀತಾ, ಶಬ್ಬೀರ್ ಎಂಬುವವರು ಹಲ್ಲೆ ನಡೆಸಿದ ಆರೋಪಿಗಳು ಎನ್ನಲಾಗ್ತಿದೆ.

ಬಟ್ಟೆ ಖರೀದಿಸಲು ಮಾರುಕಟ್ಟೆಗೆ ಬಂದಿದ್ದ ಯುವಕ, ಬಟ್ಟೆ ಖರೀದಿಸಿ ಹಾಸ್ಟೆಲ್‌ಗೆ ತೆರಳಲು ಹಳೇ ಬಸ್ ನಿಲ್ದಾಣಕ್ಕೆ ಬಂದಿದ್ದ. ಈ ವೇಳೆ ಈತನನ್ನು ನೋಡಿ ಮಹಿಳೆಯೊಬ್ಬಳು ಕೈ ಸನ್ನೆ ಮಾಡಿ ಕರೆದಿದ್ದಾಳೆ. ಬಳಿಕ ಆ ಮಹಿಳೆ ಈತನನ್ನು ಆಟೋದಲ್ಲಿ ಸುತ್ತಾಡಿಸಿ, ಕೊನೆಗೆ ಬಂಜಾರ ಕಾಲೋನಿ ಕಡೆಗೆ ಕರೆದುಕೊಂಡು ಹೋಗಿದ್ದಾಳೆ. ನಂತರ ಜತೆಗಿದ್ದ ಮೂವರು ಸಹಚರರು ಯುವಕನ ಮೇಲೆ ಹಲ್ಲೆ ಮಾಡಿ, 17 ಸಾವಿರ ರೂಪಾಯಿ ಮೌಲ್ಯದ ಮೊಬೈಲ್ ಹಾಗೂ 5,000 ರೂ. ನಗದು ಕಿತ್ತುಕೊಂಡಿದ್ದಾರೆ ಎನ್ನಲಾಗ್ತಿದೆ.

ಈ ವೇಳೆ ಯುವಕ ಆಟೋದಿಂದ ಜಿಗಿದು ತಪ್ಪಿಸಿಕೊಂಡು ಬಂದಿದ್ದಾನೆ. ಈ ಕುರಿತು ಗೋಕುಲ ರೋಡ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

Last Updated : Sep 25, 2021, 5:06 PM IST

ABOUT THE AUTHOR

...view details