ಕರ್ನಾಟಕ

karnataka

ETV Bharat / state

ಮೂತ್ರವಿಸರ್ಜನೆ ನೆಪದಲ್ಲಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾದ ಗಾಂಜಾ ಪೆಡ್ಲರ್​!

ಅಕ್ರಮ ಗಾಂಜಾ ಮಾರಟದಡಿ ಆರೋಪಿಯಾಗಿರುವ ವ್ಯಕ್ತಿಯೋರ್ವ ಇಂದು ಬೆಳಗಿನ ಜಾವ ಮೂತ್ರ ಮಾಡಿ ಬರುವುದಾಗಿ ಪೊಲೀಸರ ಬಳಿ ಹೇಳಿ ತೆರಳಿ ತದನಂತರ ಪೊಲೀಸರ ಕಣ್ತಪ್ಪಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ.

An Accused Absconded
ಪರಾರಿಯಾದ ಆರೋಪಿ

By

Published : Oct 3, 2020, 1:31 PM IST

ಹುಬ್ಬಳ್ಳಿ:ಅಕ್ರಮ ಗಾಂಜಾ ಮಾರಟದ ಆರೋಪಿಯೋರ್ವ ನಗರದ ಗೋಪನಕೊಪ್ಪ ಬಿಸಿಎಂ ಹಾಸ್ಟಲ್​​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೂತ್ರ ವಿಸರ್ಜನೆ ಮಾಡಿಬರುವುದಾಗಿ ಹೇಳಿ ಪರಾರಿಯಾದ ಘಟನೆ ಇಂದು ಬೆಳಗಿನ ಜಾವ ನಡೆದಿದೆ.

ಅಕ್ರಮ ಗಾಂಜಾ ಮಾರಾಟದಲ್ಲಿ ಬಂಧಿತ ಆರೋಪಿಯಾಗಿದ್ದ ವ್ಯಕ್ತಿಯೋರ್ವನಲ್ಲಿ ಕೊರೊನಾ ಪಾಸಿಟಿವ್​ ಗುಣ ಲಕ್ಷಣ ಕಂಡುಬಂದ ಹಿನ್ನೆಲೆ, ಗೋಪನಕೊಪ್ಪ ಬಿಸಿಎಂ ಹಾಸ್ಟಲ್​​ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಬೆಳಗಿನ ಜಾವ ಮೂತ್ರ ವಿಸರ್ಜನೆ ಮಾಡಿ ಬರುವುದಾಗಿ ಹೇಳಿ ತೆರಳಿದ ಆರೋಪಿ, ತದನಂತರ ಪೊಲೀಸರಿಗೆ ಚಳ್ಳೆಹಣ್ಣು ತಿನಿಸಿ ಅಲ್ಲಿಂದ ಪರಾರರಿಯಾಗಿದ್ದಾನೆ.

ಆರೋಪಿ ಪರಾರಿಯಾದ ಬಗ್ಗೆ ಅಶೋಕ್ ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೋಲಿಸರು ಶೋಧ ನಡೆಸಿದ್ದಾರೆ.

ABOUT THE AUTHOR

...view details