ಕರ್ನಾಟಕ

karnataka

ETV Bharat / state

ಶಾಲೆ ಆರಂಭದ ವಿಚಾರವಾಗಿ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿ: ಶಾಸಕ ಅಮೃತ್​ ದೇಸಾಯಿ - MLA Amrita Desai

ಕೊರೊನಾ ಸಂದಿಗ್ಧ ಸ್ಥಿತಿಯಲ್ಲಿ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುವ ಸ್ಥಿತಿಯಲ್ಲಿಲ್ಲ ಎಂದು ಶಾಸಕ ಅಮೃತ್​ ದೇಸಾಯಿ ತಿಳಿಸಿದ್ದಾರೆ.

Amrita Desai
ಶಾಸಕ ಅಮೃತ ದೇಸಾಯಿ

By

Published : Oct 9, 2020, 4:38 PM IST

ಧಾರವಾಡ: ಶಾಲೆ ಆರಂಭದ ಕುರಿತು ಸರ್ಕಾರ ವಿಚಾರ ಮಾಡಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಧಾರವಾಡ ಗ್ರಾಮೀಣ ಕ್ಷೇತ್ರದ ಬಿಜೆಪಿ ಶಾಸಕ ಅಮೃತ್​ ದೇಸಾಯಿ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಬ್ಬ ಶಾಸಕನಾಗಿ ಅಲ್ಲ, ಪಾಲಕನಾಗಿ ವಿಚಾರ ಮಾಡಬೇಕು. ಶಾಲೆ ಪುನಾರಂಭ ಬೇಡ ಅನ್ನೋದು ಪಾಲಕರ ಅಭಿಪ್ರಾಯ. ಕೊರೊನಾದ ಈ ಸಂದಿಗ್ಧ ಸ್ಥಿತಿಯಲ್ಲಿ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುವ ಸ್ಥಿತಿಯಲ್ಲಿಲ್ಲ ಎಂದು ಅಭಿಪ್ರಾಯಪಟ್ಟರು.

ಶಾಲೆಗಳ ಪುನಾರಂಭ ಬೇಡವೆಂದ ಶಾಸಕ ಅಮೃತ್ ದೇಸಾಯಿ

ಶಿಕ್ಷಣ ಸಚಿವರು ಶಾಸಕರ ಹಾಗೂ ಸಚಿವರ ಅಭಿಪ್ರಾಯ ಸಂಗ್ರಹಿಸುತ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ದೇಸಾಯಿ, ನಾನು ಈ ಕುರಿತಂತೆ ಮಾಧ್ಯಮದಲ್ಲಿ ನೋಡಿದ್ದೇನೆ. ಆದರೆ, ಶಿಕ್ಷಣ ಸಚಿವರು ಈ ವಿಷಯವನ್ನು ನನ್ನ ಗಮನಕ್ಕೆ ತಂದಿಲ್ಲ ಎಂದರು.

ಮಾಜಿ ಸಚಿವ ವಿನಯ್​ ಕುಲಕರ್ಣಿ ಬಿಜೆಪಿ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಶಾಸಕ ಅಮೃತ್​ ದೇಸಾಯಿ, 2018ರ ಚುನಾವಣೆ ಬಳಿಕ ಧಾರವಾಡ ಬಹಳ ಶಾಂತವಾಗಿದೆ ಎಂಬುದು ಜನಾಭಿಪ್ರಾಯವಾಗಿದೆ. ಮತ್ತೆ ಗೊಂದಲಮಯ ಮಾಡೋದು ಬೇಡ. ಅದು ನಮ್ಮ ರಾಜಾಧ್ಯಕ್ಷರ ಗಮನಕ್ಕೂ ಬಂದಿಲ್ಲ ಎಂದು ತಿಳಿಸಿದರು.

ABOUT THE AUTHOR

...view details