ಕರ್ನಾಟಕ

karnataka

ETV Bharat / state

ಹುಬ್ಬಳ್ಳಿಯಲ್ಲಿ ಅಮಿತ್​ ಶಾ ಗೌಪ್ಯ ಸಭೆ.. ಖಾಸಗಿ ಹೋಟೆಲ್​ಗೆ ಆಗಮಿಸಿದ ಸಿಎಂ ಬೊಮ್ಮಾಯಿ - Etv Bharat Kannada

ಕೇಂದ್ರ ಸಚಿವ ಅಮಿತ್​ ಶಾ ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಬಲ ಪಡಿಸುವ ಕುರಿತು ಪಕ್ಷದ ನಾಯಕರೊಂದಿಗೆ ಸಭೆ ನಡೆಸಿದ್ದಾರೆ.

ಅಮಿತ್ ಶಾ ನೇತೃತ್ವದ ಸಭೆ
ಅಮಿತ್ ಶಾ ನೇತೃತ್ವದ ಸಭೆ

By

Published : Apr 25, 2023, 7:26 AM IST

Updated : Apr 25, 2023, 9:56 AM IST

ಹುಬ್ಬಳ್ಳಿ:ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು ಇಂದು ಬೆಳಗ್ಗಿನಿಂದಲೇ ತಮ್ಮ ಕಾರ್ಯ ಆರಂಭಿಸಿದ್ದಾರೆ. ತಾವು ತಂಗಿರುವ ಖಾಸಗಿ ಹೋಟೆಲ್​ನಲ್ಲಿ ಅಮಿತ್​ ಶಾ ಗೌಪ್ಯ ಸಭೆ ನಡೆಸುತ್ತಿದ್ದು, ಅಮಿತ್ ಶಾ ಅವರನ್ನು ಭೇಟಿಯಾಗಲು ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಹಲವು ಪ್ರಮುಖರ ಸಭೆ ನಡೆಸುತ್ತಿರೋ ಅಮಿತ್ ಶಾ ಜೊತೆ ಸಿಎಂ ಬೊಮ್ಮಾಯಿ ಚುನಾವಣಾ ವಿಚಾರವಾಗಿ‌ ಚರ್ಚೆ ನಡೆಸಲಿದ್ದಾರೆ.

ರಾತ್ರೋರಾತ್ರಿ ಅಮಿತ್​ ಶಾ ಸಭೆ:ಉತ್ತರಕರ್ನಾಟಕ ಭಾಗದಲ್ಲಿ ಬಿಜೆಪಿ ಬಲಗೊಳಿಸುವ ಕುರಿತು ಅಮಿತ್​ ಶಾ ನೇತೃತ್ವದಲ್ಲಿ ನಗರದಲ್ಲಿ ಸಭೆ ನಡೆದಿದೆ. ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೊಮ್ಮೆ ಕಮಲ ಹಾರಿಸುವ ಮಹತ್ವದ ಚಿಂತನೆಯನ್ನು ಸಭೆಯ ಕೇಂದ್ರ ಬಿಂದುವನ್ನಾಗಿ ಮಾಡಿಕೊಂಡು ಈ ಮಹತ್ವದ ಸಭೆ ನಡೆಸಲಾಗಿದೆ. ಜಗದೀಶ್ ಶೆಟ್ಟರ್​​ಗೆ ಠಕ್ಕರ್ ಕೊಡಲು ರಣತಂತ್ರ ರೂಪಿಸಿದ್ದು, ಕೇಂದ್ರ ಸಚಿವರಾದ ಅಮಿತ್ ಶಾ ಹಾಗೂ ಪ್ರಹ್ಲಾದ ಜೋಶಿ ನೇತೃತ್ವದಲ್ಲಿ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ಬಿಜೆಪಿ ಮತಗಳನ್ನು ಭದ್ರಪಡಿಸುವುದರ ಜೊತೆಗೆ ಇನ್ನುಳಿದ ಮತಗಳನ್ನು ಬಿಜೆಪಿಯತ್ತ ಸೆಳೆಯುವ ಕುರಿತು ಚುನಾವಣಾ ಚಾಣಕ್ಯ ಸಲಹೆ ನೀಡಿದ್ದಾರೆ ಎನ್ನಲಾಗುತ್ತಿದೆ. ಇದೇ ವೇಳೆ ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಯಲ್ಲಿನ ಬಿಜೆಪಿಯನ್ನು ಭದ್ರಪಡಿಸುವ ನಿಟ್ಟಿನಲ್ಲಿ ಸಭೆಯಲ್ಲಿ ತಂತ್ರಗಾರಿಕೆಯ ನಡೆಸಲಾಯಿತು ಎಂದು ತಿಳಿದು ಬಂದಿದೆ. ಸಭೆಗೆ ಶಾಸಕ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಸಚಿವ ಶಂಕರಪಾಟೀಲ ಮುನೇನಕೊಪ್ಪ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಹಾಗೂ ಪ್ರಮುಖರು ಪಾಲ್ಗೊಂಡಿದ್ದರು.

ಜಗದೀಶ್​ ಶೆಟ್ಟರ್​ ಚುನಾವಣೆಯಲ್ಲಿ ಸೋಲುತ್ತಾರೆ:ಇದಕ್ಕೂ ಮುನ್ನ ನಗರದಲ್ಲಿ ಮಾಧ್ಯಮಗೋಷ್ಟಿ ನಡೆಸಿದ್ದ ಅಮಿತ್​ ಶಾ, ಮಾಜಿ ಸಿಎಂ, ಹುಬ್ಬಳ್ಳಿ - ಧಾರವಾಡ ಸೆಂಟ್ರಲ್​ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಜಗದೀಶ್ ಶೆಟ್ಟರ್ ಸ್ವಯಂ ಚುನಾವಣೆಯಲ್ಲಿ‌ ಸೋಲುತ್ತಾರೆ ಎಂದು ಅಮಿತ್​ ಶಾ ಭವಿಷ್ಯ ನುಡಿದಿದ್ದರು. ಬಿಜೆಪಿ ತನ್ನದೇ ಆದ ಮತ ಬ್ಯಾಂಕ್ ಹೊಂದಿದೆ. ಇಲ್ಲಿ ಪಕ್ಷ ಮುಖ್ಯ, ವ್ಯಕ್ತಿ ಅಲ್ಲ. ಈ ಬಾರಿ ಹಲವಾರು ಹಿರಿಯರಿಗೆ ಟಿಕೆಟ್ ಕೊಟ್ಟಿಲ್ಲ. ಬರಿ ಶೆಟ್ಟರ್ ಒಬ್ಬರಿಗೆ ಮಾತ್ರ ಟಿಕೆಟ್ ತಪ್ಪಿಸಿಲ್ಲ. ಹಾಗೇ ಇದಕ್ಕೆ ಕಾರಣವನ್ನು ಅವರಿಗೆ ಹೇಳಿದ್ದೇವೆ ಎಂದು ಶಾ ಹೇಳಿದರು.

ಬಿಜೆಪಿ ಯಾವುದೇ ವ್ಯಕ್ತಿಯ ಕಪಿಮುಷ್ಠಿಯಲ್ಲಿ ಇಲ್ಲ. ಇದು ಟೀಂ ವರ್ಕ್ ಮೂಲಕ ಕೆಲಸ ಮಾಡುತ್ತಿರುವ ರಾಜಕೀಯ ಪಕ್ಷವಾಗಿದೆ. ಕಾಂಗ್ರೆಸ್ ಪಿಎಫ್ಐಗೆ ವಿಶೇಷ ಟ್ರೀಟ್ಮೆಂಟ್ ಕೊಟ್ಟಿತ್ತು. ಆದರೆ ಇದಕ್ಕೆ ನಾವು ಲಗಾಮು ಹಾಕಿದ್ದೇವೆ. ಕಿತ್ತೂರು ಕರ್ನಾಟಕಕ್ಕೆ ಕಾಂಗ್ರೆಸ್ ಅಪಮಾನಿಸುವ ಕೆಲಸ ಮಾಡಿತು. ಅಲ್ಲದೇ ಕಾಂಗ್ರೆಸ್ ಮಹಾದಾಯಿ ಹೋರಾಟಕ್ಕೂ ನ್ಯಾಯ ನೀಡಲಿಲ್ಲ. ಆದರೆ ಬಿಜೆಪಿ ಎಲ್ಲರಿಗೂ ನ್ಯಾಯ ಕೊಡಿಸುವ ಕೆಲಸ ಮಾಡಿದೆ. ಈ ಬಾರಿಯೂ ಅತೀ ಹೆಚ್ಚು ಸ್ಥಾನ‌ ಪಡೆದು ಬಿಜೆಪಿ ಮತ್ತೊಮ್ಮೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತ ಪಡೆಸಿದರು.

ಬಿಜೆಪಿ ಕಬ್ಬು ಬೆಳಗಾರರಿಗೆ ನ್ಯಾಯ ಒದಗಿಸಿದೆ. 10 ಸಾವಿರಕ್ಕೂ ಹೆಚ್ಚಿನ ಜನರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಕಾರ್ಖಾನೆಗಳನ್ನು ಸ್ಥಾಪನೆ ಮಾಡಲಾಗಿದೆ. ಈ ಹಿಂದೆ ಸೋನಿಯಾ ಗಾಂಧಿ, ಮನಮೋಹನ್​ ಸಿಂಗ್ ಅಧಿಕಾರದಲ್ಲಿದ್ದಾಗ ಸಾವಿರ ಕೋಟಿ ಲೆಕ್ಕದಲ್ಲಿ ಹಣ ಕೊಡಲಾಗುತ್ತಿತ್ತು. ಆದರೆ ಬಿಜೆಪಿ ಸರ್ಕಾರವು ಅವರು ಕೊಟ್ಟ ಹಣಕ್ಕಿಂತ ಹೆಚ್ಚು 2.40 ಲಕ್ಷ ಕೋಟಿ ಅನುದಾನ ನೀಡಿದೆ ಎಂದು ಶಾ ಹೇಳಿದರು.

ಇನ್ನು ಮೀಸಲಾತಿ ಬಗ್ಗೆ ಸುಪ್ರೀಂ ಕೋರ್ಟ್​ನಲ್ಲಿ ವಿಚಾರಣೆ ನಡೆತಿದೆ. ಧರ್ಮಾಧಾರಿತ ಮೀಸಲಾತಿ ಕುರಿತಂತೆ ಮುಸ್ಲಿಂ ಮೀಸಲಾತಿ ತರಲಾಗುವುದು ಎಂದು ಕಾಂಗ್ರೆಸ್ ಹೇಳುತ್ತಿದೆ. ಹಾಗಾದರೆ ಯಾರ ಮೀಸಲಾತಿ ಕಡಿತ ಮಾಡುತ್ತೆ ಎಂಬುದನ್ನು ಕಾಂಗ್ರೆಸ್ ಹೇಳಲಿ. ಕಾಂಗ್ರೆಸ್ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಿತ್ತು. ಅದನ್ನು ನಮ್ಮ ಸರ್ಕಾರ ರದ್ದು ಮಾಡಿದೆ. ಈ ಮೂಲಕ ಸಾಮಾಜಿಕ ನ್ಯಾಯ ಕೊಡುವ ಕೆಲಸ ಮಾಡಿದೆ. ಧರ್ಮಾಧಾರಿತ ಮೀಸಲಾತಿ ಸಾಂವಿಧಾನಿಕವಲ್ಲ. ಕಾಂಗ್ರೆಸ್​ ರಾಜಕಾರಣಕ್ಕಾಗಿ ಧರ್ಮಾಧಾರಿತ ಮೀಸಲಾತಿಯನ್ನ ನೀಡಿತ್ತು. ಧರ್ಮಾಧಾರಿತ ಮೀಸಲಾತಿ ಎಂದೂ ಒಪ್ಪವುದಿಲ್ಲ ಎಂದು ಅಮಿತ್​ ಶಾ ಪುನರುಚ್ಚರಿಸಿದರು.

ಇದನ್ನೂ ಓದಿ:ಚಾಣಕ್ಯನ ಮಿಂಚಿನ ಸಂಚಾರ: ಕೈಪಡೆ ವಿರುದ್ಧ ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಶಾ

Last Updated : Apr 25, 2023, 9:56 AM IST

ABOUT THE AUTHOR

...view details