ಹುಬ್ಬಳ್ಳಿ: ಅವಳಿ ನಗರ ಸಂಪರ್ಕಿಸಲು ಆರಂಭಿಸಿರುವ ಬಿಆರ್ಟಿಎಸ್ ಸಾರಿಗೆಯ ಪ್ರತ್ಯೇಕ ಕಾರಿಡಾರ್ ರಸ್ತೆಯಲ್ಲಿ ಯಾವುದೇ ಖಾಸಗಿ ವಾಹನಗಳ ಓಡಾಡ ನಿಷೇಧಿಸಲಾಗಿದೆ. ಆದರೆ ಪೊಲೀಸರು, ರಾಜಕಾರಣಿಗಳು ಮತ್ತು ತುರ್ತು ವಾಹನಗಳಿಗೆ ಈ ಮಾರ್ಗದಲ್ಲಿ ಸಂಚರಿಸಲು ಅವಕಾಶವಿದೆ.
ಆದರೆ ರೋಗಿಯೊಬ್ಬರನ್ನು ಈ ಮಾರ್ಗದ ಮೂಲಕ ಆಸ್ಪತ್ರೆಗೆ ಸಾಗಿಸಿದ್ದ ಆ್ಯಂಬುಲೆನ್ಸ್ಗೆ ಬಿಆರ್ಟಿಎಸ್ ಅಧಿಕಾರಿಗಳು ದಂಡ ವಿಧಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಬಿಆರ್ಟಿಎಸ್ ಸಾರಿಗೆಯ ಈ ಪ್ರತ್ಯೇಕ ಕಾರಿಡಾರ್ ನಿರ್ಮಾಣ ಅವೈಜ್ಞಾನಿಕವಾಗಿದೆ ಅನ್ನೋ ಆರೋಪವಿದೆ. ಅಲ್ಲದೇ ಈ ಪ್ರತ್ಯೇಕ ಕಾರಿಡಾರ್ ನಿರ್ಮಾಣದಿಂದ ಹುಬ್ಬಳ್ಳಿ-ಧಾರವಾಡ ಮಾರ್ಗ ಇಕಟ್ಟಿನಿಂದ ಕೂಡಿದೆ. ಇತಂಹ ಪರಿಸ್ಥಿತಿಯಲ್ಲಿ ಕಾರಡಾರ್ನಲ್ಲಿ ಅಂಬುಲೈನ್ಸ್ ಸಂಚರಿಸಲು ಅನುಮತಿ ಇದ್ದರೂ ಅಧಿಕಾರಿಗಳು ಮಾತ್ರ ಆ್ಯಂಬುಲೆನ್ಸ್ಗೆ ದಂಡ ವಿಧಿಸಿ ದರ್ಪ ಮೆರೆದಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.