ಹುಬ್ಬಳ್ಳಿ : ವೇಗವಾಗಿ ಬೆಳೆಯುತ್ತಿರುವ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ವೃದ್ಧಿಸುತ್ತಿದ್ದು, ವಾಹನ ಸವಾರರು ಪರದಾಡುವುದು ಸಾಮಾನ್ಯವಾಗಿಬಿಟ್ಟಿದೆ.
ಆಂಬ್ಯುಲೆನ್ಸ್ ತೆರಳಲು ಸಿಗದ ದಾರಿ; ರೋಗಿಯ ಪರದಾಟ
ಹುಬ್ಬಳ್ಳಿಯಲ್ಲಿ ಟ್ರಾಫಿಕ್ ಸಮಸ್ಯೆಯಿಂದ ಆಂಬ್ಯುಲೆನ್ಸ್ನಲ್ಲಿದ್ದ ರೋಗಿಯೊಬ್ಬರು ಪರಿದಾಡಿದ ಘಟನೆ ನಡೆಯಿತು. ಅಲ್ಲೇ ಇದ್ದ ಪೊಲೀಸ್ ಸಿಬ್ಬಂದಿ ಟ್ರಾಫಿಕ್ ಕ್ಲೀಯರ್ ಮಾಡಿಸಲು ಹರಸಾಹಸ ಪಡಬೇಕಾಯಿತು.
ಟ್ರಾಫಿಕ್ನಲ್ಲಿ ಸಿಲುಕಿಕೊಂಡ ಆಂಬ್ಯುಲೆನ್ಸ್
ಆದರೆ, ನಗರದಲ್ಲಿಂದು ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್ ವಾಹನವೊಂದು ಟ್ರಾಫಿಕ್ನಲ್ಲಿ ಸಿಲುಕಿಕೊಂಡು ಪರದಾಡಿದ ಘಟನೆ ಭಾರತ್ ಮಿಲ್ ಬಳಿ ನಡೆಯಿತು.
ಅವ್ಯವಸ್ಥಿತ ಹಾಗೂ ಅವೈಜ್ಞಾನಿಕ ಸಂಚಾರ ಹಿನ್ನೆಲೆಯಲ್ಲಿ ಆಂಬ್ಯುಲೆನ್ಸ್ ಮಾರ್ಗಮಧ್ಯದಲ್ಲಿ ಸಿಲುಕಿಕೊಂಡು ಪರದಾಟ ನಡೆಸಿತು. ಅಲ್ಲೇ ಇದ್ದ ಪೊಲೀಸ್ ಸಿಬ್ಬಂದಿ ಟ್ರಾಫಿಕ್ ಕ್ಲೀಯರ್ ಮಾಡಿಸಲು ಹರಸಾಹಸ ಪಡಬೇಕಾಯಿತು.
Last Updated : Oct 29, 2020, 10:16 PM IST