ಧಾರವಾಡ: ಕೊರೊನಾ ಲಾಕ್‌ಡೌನ್ ಹಿನ್ನೆಲೆ ಧಾರವಾಡ ಜಿಲ್ಲೆಯನ್ನು ರೆಡ್ ಝೋನ್‌ನಲ್ಲಿಟ್ಟು ಆದೇಶ ಹೊರಡಿಸಿದರೂ ನಿಯಮ ಉಲ್ಲಂಘಿಸಿ ಪ್ರಾರ್ಥನೆ ಸಲ್ಲಿಸಿದ ಆರೋಪ ನಗರದಲ್ಲಿ ಕೇಳಿಬಂದಿದೆ.
ಲಾಕ್‌ಡೌನ್ ನಡುವೆಯೂ ಸಾಮೂಹಿಕ ಪ್ರಾರ್ಥನೆ ಮಾಡಿದ ಆರೋಪ: ಲಾಠಿ ಬೀಸಿದ ಪೊಲೀಸರು - Alleged Prayer Between Lockdown at Dharwad
ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಪ್ರಾರ್ಥನೆ ಸಲ್ಲಿಸಿದ 12 ಜನರ ಮೇಲೆ ಎಫ್ಐಆರ್ ದಾಖಲಿಸಲು ಪೊಲೀಸರು ನಿರ್ಧರಿಸಿದ್ದಾರೆ.
ಲಾಕ್‌ಡೌನ್ ನಡುವೆ ಪ್ರಾರ್ಥನೆ ಮಾಡಿದ ಆರೋಪ: ಲಾಠಿ ಬೀಸಿದ ಪೊಲೀಸರು
ಧಾರವಾಡದ ಕುಮಾರೇಶ್ವರ ನಗರ ಬಡಾವಣೆಯಲ್ಲಿ ಆಲ್ ಕಾಸೀಂ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಲಾಗಿದೆ ಎನ್ನಲಾಗುತ್ತಿದೆ. ಪ್ರಾರ್ಥನೆ ಸಲ್ಲಿಸಿದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.
ಪ್ರಾರ್ಥನೆ ಸಲ್ಲಿಸಿದ 12 ಜನರ ಮೇಲೆ ಎಫ್ಐಆರ್ ದಾಖಲಿಸಲು ಉಪ ನಗರ ಠಾಣೆ ಪೊಲೀಸರು ನಿರ್ಧಾರ ಮಾಡಿದ್ದಾರೆ.