ಧಾರವಾಡ: ಉದ್ಯಮಿಗಳಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ಬಚ್ಚಾಖಾನ್ನನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್ 4 ದಿನ ಆತನನ್ನು ಧಾರವಾಡ ಉಪನಗರ ಠಾಣೆ ಪೊಲೀಸ್ ವಶಕ್ಕೆ ನೀಡುವಂತೆ ಸೂಚಿಸಿದೆ.
ನಾಲ್ಕು ದಿನ ಬಚ್ಚಾಖಾನ ಪೊಲೀಸ್ ವಶಕ್ಕೆ ಡಿ. 31ರವರೆಗೆ ಪೊಲೀಸ್ ವಶಕ್ಕೆ ನೀಡಲಾಗಿದೆ. ಡಿ. 31ರಂದು ಸಂಜೆ 5 ಗಂಟೆಗೆ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಕೋರ್ಟ್ ಸೂಚಿಸಿದೆ.
ಓದಿ:ನನ್ನ ಹೆಸರಿನಲ್ಲಿ ಯಾರೋ ಧಮ್ಕಿ ಹಾಕುತ್ತಿದ್ದಾರೆ - ಭೂಗತ ಪಾತಕಿ ಬಚ್ಚಾಖಾನ್
ನಿನ್ನೆ ರಾತ್ರಿ ಮೈಸೂರು ಕಾರಾಗೃಹದಿಂದ ಬಚ್ಚಾಖಾನ್ನನ್ನು ಉಪನಗರ ಠಾಣೆ ಪೊಲೀಸರು ಧಾರವಾಡಕ್ಕೆ ಕರೆತಂದಿದ್ದರು. ಧಾರವಾಡದ ವಿವಿಧ ಉದ್ಯಮಿಗಳಿಗೆ ಬಂಟರ ಮೂಲಕ ಧಮ್ಕಿ ಹಾಕಿಸಿರುವ ಆರೋಪದ ಹಿನ್ನೆಲೆ ಕರೆಯಲಾಗಿತ್ತು. ನ್ಯಾಯಾಲಯದಲ್ಲಿ ಬಚ್ಚಾಖಾನ್ ಪರ ವಕೀಲರು ಜೈಲಿನಲ್ಲಿ ಯಾರ ಜೊತೆಯೂ ಮಾತನಾಡಿಲ್ಲ ಎಂದು ವಾದ ಮಂಡಿಸಿದರು. ಅದಕ್ಕೆ ಪೊಲೀಸರು ಪ್ರತಿವಾದ ಮಾಡಿ ನಮ್ಮ ಹತ್ತಿರ ದಾಖಲೆಗಳಿವೆ ಎಂದು ಹೇಳಿದರು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿ ಬಚ್ಚಾಖಾನ್ನನ್ನು ಪೊಲೀಸ್ ವಶಕ್ಕೆ ನೀಡಿದೆ.