ಧಾರವಾಡ :ಕೊರೊನಾ ನಿಯಮ ಪಾಲಿಸಬೇಕಾದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ರೂಲ್ಸ್ ಬ್ರೇಕ್ ಮಾಡಿದ ಆರೋಪ ಕೇಳಿ ಬಂದಿದೆ. ನೈಟ್ ಕರ್ಪ್ಯೂ ಇದ್ರೂ ನಿವಾಸದ ಗೇಟ್ ಹಾಕಿಕೊಂಡು ಮಗನ ಜನ್ಮದಿನ ಆಚರಿಸಿದ್ದಾರೆ ಎನ್ನಲಾಗ್ತಿದೆ.
ನೈಟ್ ಕರ್ಫ್ಯೂ ವೇಳೆ ಕೊರೊನಾ ರೂಲ್ಸ್ ಬ್ರೇಕ್ ಮಾಡಿದ್ರಾ ಧಾರವಾಡ ಡಿಸಿ? - ಧಾರವಾಡ ಜಿಲ್ಲಾಧಿಕಾರಿ ಸುದ್ದಿ
ಧಾರವಾಡ ಜಿಲ್ಲಾಧಿಕಾರಿ ರಾತ್ರಿ 11 ಘಂಟೆಯಾದ್ರೂ ಅದ್ಧೂರಿಯಾಗಿ ಮಗನ ಜನ್ಮದಿನ ಆಚರಿಸಿರುವ ಆರೋಪ ಕೇಳಿ ಬಂದಿದೆ. ಬರ್ತ್ಡೇಯಲ್ಲಿ ಮಾಸ್ಕ್ ಹಾಕಿಕೊಳ್ಳದೆಯೇ ಅಧಿಕಾರಿಗಳು ಭಾಗಿಯಾಗಿದ್ದರು ಎನ್ನಲಾಗಿದೆ. ಇದರಿಂದಾಗಿ ಅಧಿಕಾರಿಗಳಿಗೊಂದು ನ್ಯಾಯ, ಜನರಿಗೊಂದು ನ್ಯಾಯನಾ ಅಂತ ಜನ ಪ್ರಶ್ನಿಸುತ್ತಿದ್ದಾರೆ.
ಮಗನ ಮೊದಲನೇ ವರ್ಷದ ಜನ್ಮದಿನವನ್ನು ಡಿಸಿ ನಿತೇಶ್ ಪಾಟೀಲ ಅದ್ಧೂರಿಯಾಗಿ ಆಚರಣೆ ಮಾಡಿದ್ದಾರೆ. ಎಲ್ಲ ತಾಲೂಕು ತಹಶೀಲ್ದಾರ್ಗಳು ಮತ್ತು ಸರಕಾರಿ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಎಂದು ಹೇಳಲಾಗಿದೆ.
ಇವರ ನಿವಾಸವನ್ನು ಲೈಟ್ನಿಂದ ಅಲಂಕಾರ ಮಾಡಿ ಬರ್ತ್ ಡೇ ಮಾಡಿದ್ದಾರೆ. ರಾತ್ರಿ 11 ಘಂಟೆಯಾದ್ರೂ ಜನ್ಮದಿನ ಸಂಭ್ರಮಾಚರಣೆ ಮುಂದುವರೆದಿತ್ತು ಎನ್ನಲಾಗಿದೆ. ಬರ್ತ್ಡೇಯಲ್ಲಿ ಮಾಸ್ಕ್ ಹಾಕಿಕೊಳ್ಳದೆಯೇ ಅಧಿಕಾರಿಗಳು ಭಾಗಿಯಾಗಿದ್ದರು ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಅಧಿಕಾರಿಗಳಿಗೊಂದು ನ್ಯಾಯ, ಜನರಿಗೊಂದು ನ್ಯಾಯನಾ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.