ಗಂಗಾವತಿ(ಕೊಪ್ಪಳ): ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ಗೆ ಅವಮಾನ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಗಣೇಶನನ್ನು ಪ್ರತಿಷ್ಠಾಪಿಸಿದ್ದ ಸಮಿತಿಯ ವಿರುದ್ಧ ಇಲ್ಲಿನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾದಿಗ ಸಮಾಜದ ಯುವಕರನ್ನೊಳಗೊಂಡ ವಿನಾಯಕ ಸ್ನೇಹ ವೃಂದದ ವಿರುದ್ಧ ದಲಿತಪರ ಹೋರಾಟಗಾರ ಹುಲುಗಪ್ಪ ಮಾಗಿ ದೂರು ಸಲ್ಲಿಸಿದ್ದಾರೆ. ಪ್ರಕರಣದಿಂದಾಗಿ ಗಲಭೆ, ಕೋಮು ಪ್ರಚೋದನೆ ಆಗಿದೆ ಎಂದು ಆರೋಪ ಮಾಡಿದ್ದಾರೆ.
ಅಂಬೇಡ್ಕರ್ ನಗರದ ಸಾರ್ವಜನಿಕ ಸ್ಥಳದಲ್ಲಿ ಅಂಬೇಡ್ಕರ್ ಅವರ ದೇಹಕ್ಕೆ ವಿನಾಯಕನ ತಲೆ ಇಟ್ಟಿರುವ ಭಂಗಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ವಾಸ್ತವವಾಗಿ ಅಂಬೇಡ್ಕರ್ ಅವರು ಗುಡಿ ಗಂಟೆಯನ್ನು ಬಾರಿಸುವ ಬದಲು ಶಾಲೆಯ ಗಂಟೆ ಬಾರಿಸುವ ಮೂಲಕ ಶೈಕ್ಷಣಿಕ ಉನ್ನತಿ ಪಡೆಯುವಂತೆ ಸಮಾಜಕ್ಕೆ ತಿಳಿ ಹೇಳುತ್ತಿದ್ದರು. ಆದರೆ ಇಂತಹ ನಾಯಕನ ದೇಹಕ್ಕೆ ದೇವರ ಶಿರವಿಟ್ಟು ಅವಮಾನ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ:ಮುರುಘಾ ಶ್ರೀಗಳ ಆರೋಗ್ಯದಲ್ಲಿ ಏರುಪೇರು: ಐಸಿಯು ವಾರ್ಡ್‌ಗೆ ದಾಖಲು