ಹುಬ್ಬಳ್ಳಿ: ಪೊಲೀಸ್ ಪೇದೆಯೊಬ್ಬನ ಕಿರುಕುಳ ತಾಳಲಾರದೆ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆಗ ನಗರದಲ್ಲಿ ನಡೆದಿದೆ.
ವಿಜಯ್ ತಿಮ್ಮೊತಿ ತಲ್ಪಾಟಿ ಆತ್ಮಹತ್ಯೆಗೆ ಯತ್ನಿಸಿದ ಯುವಕನಾಗಿದ್ದು, ಕೇಶ್ವಾಪುರ ಠಾಣೆ ಪೊಲೀಸ್ ಪೇದೆಯೊಬ್ಬ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಮಾಮೂಲಿ ಹಣ ನೀಡುವಂತೆ ಪೊಲೀಸ್ ಪೇದೆ ನಿತ್ಯ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಹೀಗಾಗಿ ಬೇಸತ್ತು ವಿಜಯ್ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಯತ್ನ ನಡೆಸಿದ್ದಾನೆ ಎಂದು ತಿಳಿದು ಬಂದಿದೆ. ತೀವ್ರವಾಗಿ ಅಸ್ವಸ್ಥಗೊಂಡ ಈತನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪೊಲೀಸ್ ಪೇದೆಯಿಂದ ಕಿರುಕುಳ ಆರೋಪ: ಯುವಕನಿಂದ ಆತ್ಮಹತ್ಯೆ ಯತ್ನ - ಯುವಕನಿಂದ ಆತ್ಮಹತ್ಯೆ ಯತ್ನ
ಪೊಲೀಸ್ ಪೇದೆಯಿಂದ ಕಿರುಕುಳ ಆರೋಪ. ಕಿರುಕುಳ ತಾಳಲಾರದೆ ಯುವಕನಿಂದ ಆತ್ಮಹತ್ಯೆ ಯತ್ನ. ಹುಬ್ಬಳ್ಳಿಯಲ್ಲಿ ಘಟನೆ.
![ಪೊಲೀಸ್ ಪೇದೆಯಿಂದ ಕಿರುಕುಳ ಆರೋಪ: ಯುವಕನಿಂದ ಆತ್ಮಹತ್ಯೆ ಯತ್ನ](https://etvbharatimages.akamaized.net/etvbharat/prod-images/768-512-3963042-thumbnail-3x2-hhjd.jpg)
ಯುವಕ ಆತ್ಮಹತ್ಯೆಗೆ ಯತ್ನ
ಪೊಲೀಸ್ ಪೇದೆಯಿಂದ ಕಿರುಕುಳದಿಂದ ಯುವಕನ ಆತ್ಮಹತ್ಯೆ ಯತ್ನ
ವಿಜಯ್ ರೈಲ್ವೆ ಗುತ್ತಿಗೆದಾರನಾಗಿದ್ದು, ನಿಶಾಂತ್ ಎಂಬಾತನನೊಟ್ಟಿಗೆ ಹಣಕಾಸಿನ ವ್ಯವಹಾರವಿತ್ತು. ಆತ್ಮಹತ್ಯೆಗೆ ಯತ್ನಿಸಿದ ವಿಜಯ್ ನಿಶಾಂತ್ಗೆ ಹಣ ನೀಡಿದ್ದ. ಇಬ್ಬರ ವ್ಯವಹಾರದಲ್ಲಿ ಪೇದೆ ಮೂಗು ತೂರಿಸಿ ನಿಶಾಂತ್ ಪರವಾಗಿ ನಿಂತಿದ್ದಲ್ಲದೆ, ವಿಜಯ್ಗೆ ಮಾನಸಿಕ ಕಿರುಕುಳ ನೀಡಿ ಹಣ ಕೊಡುವಂತೆ ಸತಾಯಿಸುತ್ತಿದ್ದನಂತೆ. ಘಟನೆ ಸಂಬಂಧ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Jul 27, 2019, 9:55 PM IST