ಕರ್ನಾಟಕ

karnataka

ETV Bharat / state

ಆಹಾರ ಕಿಟ್​ ವಿತರಣೆಯಲ್ಲಿ ತಾರತಮ್ಯ ಆರೋಪ - ಹುಬ್ಬಳ್ಳಿಯಲ್ಲಿ ಆಹಾರದ ಕಿಟ್​ ವಿತರಣೆ

ಸರ್ಕಾರದ ಬಡ ಹಾಗೂ ನಿರ್ಗತಿಕರ ಸಹಾಯಕ್ಕೆ ತೆರೆದ ಸಹಾಯವಾಣಿಯಿಂದ ಆಹಾರದ ಕಿಟ್​ಗಳನ್ನು ನೀಡಲಾಗುತ್ತಿದೆ. ಈ ವಿತರಣೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಹುಬ್ಬಳ್ಳಿ ನಗರದ ಮಹಿಳೆಯರು ಆರೋಪಿಸಿದ್ದಾರೆ.

discrimination in food kit delivery
ಆಹಾರ ಕಿಟ್​ ವಿತರಣೆಯಲ್ಲಿ ತಾರತಮ್ಯ ಆರೋಪ

By

Published : Apr 17, 2020, 6:35 PM IST

ಹುಬ್ಬಳ್ಳಿ:ಬಡವರಿಗೆ, ನಿರ್ಗತಿಕರಿಗೆ ಜಿಲ್ಲಾಡಳಿತ ಒದಗಿಸುವ ಆಹಾರ ಕಿಟ್​ನಲ್ಲಿ ತಾರತಮ್ಯದ ಆರೋಪ‌ ಹುಬ್ಬಳ್ಳಿ ನಗರದಲ್ಲಿ ಕೇಳಿ ಬಂದಿದೆ.

ಆಹಾರ ಕಿಟ್​ ವಿತರಣೆಯಲ್ಲಿ ತಾರತಮ್ಯ ಆರೋಪ

‌ಕೊರೊನಾ ಸೋಂಕು ತಡೆಗೆ ಲಾಕ್​ಡೌನ್ ಘೋಷಿಸಿದ್ದು, ಕಾರ್ಮಿಕ ವರ್ಗ ಕೆಲಸವಿಲ್ಲದೇ ಕಂಗಾಲಾಗಿತ್ತು. ದಿನಗೂಲಿ ನಂಬಿ ಬದುಕು ಕುಟುಂಬಗಳು ಆಹಾರಕ್ಕಾಗಿ ಹಪಹಪಿಸುವಂತಾಗಿತ್ತು. ಇವರ ಸಹಾಯಕ್ಕೆ ಜಿಲ್ಲಾಡಳಿತ ಸಹಾಯವಾಣಿ ತೆರೆದು ಸಂಘ-ಸಂಸ್ಥೆಗಳು, ದಾನಿಗಳು ನೀಡಿದ ಆಹಾರ ಧಾನ್ಯಗಳ ಕಿಟ್​ಗಳನ್ನು ಒದಗಿಸುವ ಕೆಲಸ ಮಾಡುತ್ತಿದೆ. ಆದರೆ, ಆಹಾರ ಕಿಟ್​ಗಳ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ನಾವೂ ಬಡವರು ನಮಗೂ ನೀಡಿ:ಚುನಾವಣೆ ಸಂದರ್ಭದಲ್ಲಿ ಎಲ್ಲ ರಾಜಕೀಯ ಮುಖಂಡರು ಮನೆ ಬಾಗಿಲಿಗೆ ಬರುತ್ತಾರೆ. ಈಗ ಆಹಾರದ ಕೊರೆತೆಯಿಂದ ನರಳಾಡುತ್ತಿದ್ದೇವೆ. ಮನೆಯಲ್ಲಿ ಮಕ್ಕಳಿದ್ದಾರೆ. ಯಾವುದೇ ತಾರತಮ್ಯ ಮಾಡದೇ ನಮಗೂ ಕಿಟ್​ಗಳನ್ನು ವಿತರಿಸಿ ಎಂದು ಸ್ಥಳೀಯರಾದ ಗೌರಮ್ಮ ಮನವಿ ಮಾಡಿದ್ದಾರೆ.

ABOUT THE AUTHOR

...view details