ಹುಬ್ಬಳ್ಳಿ :ಧಾರವಾಡದ ಕೃಷಿ ಇಲಾಖೆಯ ಅಧಿಕಾರಿಗಳ ಮಹಾ ಎಡವಟ್ಟು ಬಯಲಾಗಿದೆ. ಪರಿಹಾರ ಡೇಟಾ ಎಂಟ್ರಿ ರಿಪೋರ್ಟ್‌ನಲ್ಲಿ ಎರಡೂ ತಾಲೂಕುಗಳನ್ನೇ ಕೃಷಿ ಅಧಿಕಾರಿಗಳು ಕೈಬಿಟ್ಟಿದ್ದು, ಅಧಿಕಾರಿಗಳ ಬೇಜವಾಬ್ದಾರಿಯಿಂದ ರೈತರಿಗೆ ಪರಿಹಾರ ಕೈತಪ್ಪುತ್ತಿದೆ.
ಅಧಿಕಾರಿಗಳ ಬೇಜವಾಬ್ದಾರಿತನದಿಂದ ಅನ್ನದಾತ ಹಿಡಿಶಾಪ ಹಾಕುತ್ತಿದ್ದಾನೆ. ಈಟಿವಿ ಭಾರತಕ್ಕೆ ಪರಿಹಾರ ಡಾಟಾ ಎಂಟ್ರಿ ಪ್ರೋಗ್ರೇಸ್ ರಿಪೋರ್ಟ್ ಲಭ್ಯವಾಗಿದೆ. ಈ ರಿಪೋರ್ಟ್‌ನಲ್ಲಿ ಕಲಘಟಗಿ ಹಾಗೂ ಅಳ್ನಾವರ ತಾಲೂಕನ್ನು ಕೈಬಿಟ್ಟ ಅಧಿಕಾರಿಗಳ ಬೇಜವಾಬ್ದಾರಿತನವನ್ನು ಮೆರೆದಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಒಟ್ಟು ಏಳು ತಾಲೂಕುಗಳಿವೆ. ಧಾರವಾಡ, ಹುಬ್ಬಳ್ಳಿ, ಕುಂದಗೋಳ, ನವಲಗುಂದ ಅಣ್ಣಿಗೇರಿ ಕಲಘಟಗಿ ಹಾಗೂ ಅಳ್ನಾವರ ಈ ತಾಲೂಕುಗಳು ಧಾರವಾಡ ಜಿಲ್ಲೆಯಲ್ಲಿವೆ. ಆದರೆ ದಾಖಲೆಯಲ್ಲಿ ಕಲಘಟಗಿ ಮತ್ತು ಅಳ್ನಾವರ ಎರಡೂ ತಾಲೂಕುಗಳು ನಾಪತ್ತೆಯಾಗಿve. ಧಾರವಾಡ ಜಿಲ್ಲೆಯ ಏಳು ತಾಲೂಕಿನಲ್ಲಿಯೂ ಅತಿವೃಷ್ಟಿಯಾಗಿದೆ.
ಎರಡು ತಾಲೂಕು ಕೈ ಬಿಟ್ಟ ಅಧಿಕಾರಿಗಳು ಮಾಹಿತಿ ಈಟಿವಿ ಭಾರತಕ್ಕೆ ಲಭ್ಯ ಅದರಲ್ಲೂ ಕಲಘಟಗಿ ಮತ್ತು ಅಳ್ನಾವರ ತಾಲೂಕಿನಲ್ಲಿ ಅಧಿಕಾರಿಗಳ ಅಂಕಿ ಅಂಶಗಳ ಪ್ರಕಾರ 18 ಸಾವಿರ ಹೆಕ್ಟೇರ್ ಪ್ರದೇಶದ ಬೆಳೆ ನಾಶವಾಗಿದೆ. ಸೋಯಾಬಿನ್ ಮತ್ತು ಮೆಕ್ಕೆಜೋಳ ಬೆಳೆಗಳು ನೆಲಕಚ್ಚಿವೆ ಎಂದು ಈಗಾಗಲೇ ವರದಿ ನೀಡಿದ ಅಧಿಕಾರಿಗಳು ಡೇಟಾ ಎಂಟ್ರಿಯಲ್ಲಿ ಮಾತ್ರ ಎರಡೂ ತಾಲೂಕುಗಳನ್ನ ಲೆಕ್ಕಕ್ಕೆ ತೆಗೆದುಕೊಂಡಿಲ್ಲ.
ಇದನ್ನೂ ಓದಿ :ಜಲಪ್ರಳಯದಿಂದ ಹಾನಿ: ಕೊಡಗಿಗೆ ಕೇಂದ್ರ ಅಧ್ಯಯನ ತಂಡ ಭೇಟಿ, ಪರಿಶೀಲನೆ