ಕರ್ನಾಟಕ

karnataka

ETV Bharat / state

50 ಕೋಟಿ ರೂ.ಗೂ ಹೆಚ್ಚು ಬಿಲ್​ ಪೆಂಡಿಂಗ್​: ಹುಬ್ಬಳ್ಳಿಯಲ್ಲಿ ರೈಲ್ವೆ ಗುತ್ತಿಗೆದಾರರ ಸಂಘ ಪ್ರತಿಭಟನೆ - ಗುತ್ತಿಗೆದಾರರಿಗೆ ಕಾಮಗಾರಿ ಹಣ ನೀಡದ ರೈಲ್ವೆ ಅಧಿಕಾರಿಗಳು

ನೈಋತ್ಯ ರೈಲ್ವೆ ವಲಯದ ಗುತ್ತಿಗೆದಾರರ ಸಂಘ ಹಾಗೂ ಅಖಿಲ ಭಾರತ ರೈಲ್ವೆ ಮೂಲಸೌಕರ್ಯ ಪೂರೈಕೆದಾರರ ಸಂಘದ ಕಾರ್ಯಕರ್ತರು ರೈಲ್ವೆ ಅಧಿಕಾರಿಗಳ ನಡೆಯನ್ನು ಖಂಡಿಸಿ ಹಾಗೂ ಗುತ್ತಿಗೆದಾರರ ಬಾಕಿ ಹಣ ಪಾವತಿಸುವಲ್ಲಿ ಅಧಿಕಾರಿಗಳ ವಿಳಂಬ ಧೋರಣೆ ಖಂಡಿಸಿ ಇಂದು ರೈಲ್ವೇ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

Railway Contractors Association protest
ರೈಲ್ವೆ ಗುತ್ತಿಗೆದಾರರ ಸಂಘ

By

Published : Mar 6, 2020, 2:01 PM IST

ಹುಬ್ಬಳ್ಳಿ:ನೈಋತ್ಯ ರೈಲ್ವೆ ವಲಯದ ಗುತ್ತಿಗೆದಾರರ ಸಂಘ ಹಾಗೂ ಅಖಿಲ ಭಾರತ ರೈಲ್ವೆ ಮೂಲಸೌಕರ್ಯ ಪೂರೈಕೆದಾರರ ಸಂಘದ ಕಾರ್ಯಕರ್ತರು ರೈಲ್ವೆ ಅಧಿಕಾರಿಗಳ ನಡೆಯನ್ನು ಖಂಡಿಸಿ ಹಾಗೂ ಗುತ್ತಿಗೆದಾರರ ಬಾಕಿ ಹಣ ಪಾವತಿಸುವಲ್ಲಿ ಅಧಿಕಾರಿಗಳ ವಿಳಂಬ ಧೋರಣೆ ಖಂಡಿಸಿ ಇಂದು ರೈಲ್ವೇ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ರೈಲ್ವೆ ಅಧಿಕಾರಿಗಳು ಗುತ್ತಿಗೆದಾರರಿಗೆ ಕಾಮಗಾರಿ ಹಣವನ್ನು ನೀಡದೆ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಅಲ್ಲದೇ ಜಿಎಸ್​ಟಿ ಜಾರಿಯಾದಾಗಿನಿಂದ ಬಿಲ್ ಪೆಂಡಿಂಗ್ ಉಳಿದಿದ್ದು, ಕೂಡಲೇ ಅವುಗಳನ್ನು ಕ್ಲಿಯರ್ ಮಾಡಬೇಕು ಎಂದು ಪ್ರತಿಭಟನಾ ನಿರತ ಗುತ್ತಿಗೆದಾರರು ಒತ್ತಾಯಿಸಿದರು.

ರೈಲ್ವೆ ಗುತ್ತಿಗೆದಾರರ ಸಂಘ ಪ್ರತಿಭಟನೆ

ಹುಬ್ಬಳ್ಳಿ ವಲಯದಲ್ಲಿಯೇ ಗುತ್ತಿಗೆದಾರರ 50 ಕೋಟಿಗೆ ಹೆಚ್ಚು ಹಣ ಬಾಕಿ ಇದೆ. ಅಲ್ಲದೇ ಈ ಕುರಿತು ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಕಾಳಜಿ ವಹಿಸುತ್ತಿಲ್ಲ. ಇಂತಹ ವ್ಯವಸ್ಥೆಯಿಂದ ಗುತ್ತಿಗೆದಾರರು ಹಾಗೂ ಅವರ ಕುಟುಂಬ ಸಂಕಷ್ಟ ಅನುಭವಿಸುವಂತಾಗಿದೆ. ಕೂಡಲೇ ಈ ಬಗ್ಗೆ ಅಧಿಕಾರಿಗಳು ಗಮನಹರಿಸಿ ನೈಋತ್ಯ ರೈಲ್ವೇ ವಲಯದ ಗುತ್ತಿಗೆದಾರರ ಸಂಘ ಹಾಗೂ ರೈಲ್ವೆ ಮೂಲಸೌಕರ್ಯ ಪೂರೈಕೆದಾರರ ಸಂಘದ ಹಿತಾಸಕ್ತಿ ಕಾಪಾಡಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ABOUT THE AUTHOR

...view details