ಕರ್ನಾಟಕ

karnataka

ETV Bharat / state

ಅಮಿತ್ ಶಾ ಪ್ರಚೋದಾನಾತ್ಮಕ ಹೇಳಿಕೆ ನೀಡುವುದನ್ನು ನಿಲ್ಲಿಸಲಿ: ಮಲ್ಲಿಕಾರ್ಜುನ‌ ಖರ್ಗೆ - ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ದಂಗೆ

ಒಂದು ಕಡೆ ಭ್ರಷ್ಟಾಚಾರ, ಇನ್ನೊಂದು ಕಡೆ ನಿರುದ್ಯೋಗ ಮತ್ತೊಂದು ಕಡೆ ಬೆಲೆ ಏರಿಕೆ. ಅನೇಕ ನ್ಯೂನ್ಯತೆಗಳು ಈ ರಾಜ್ಯದಲ್ಲಿವೆ. ಈ ಸರ್ಕಾರ ತೆಗೆದುಹಾಕಲು ಜನ ತೀರ್ಮಾನಿಸಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಿಳಿಸಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

By

Published : Apr 26, 2023, 7:23 PM IST

Updated : Apr 26, 2023, 8:20 PM IST

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಹುಬ್ಬಳ್ಳಿ : ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ದಂಗೆಗಳು ಆಗುತ್ತವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಚೋದಾನಾತ್ಮಕ ಹೇಳಿಕೆ ನೀಡುತ್ತಿದ್ದಾರೆ‌. ಸಾರ್ವಜನಿಕ ಸಮಾರಂಭದಲ್ಲಿ ಇಂತಹ ಹೇಳಿಕೆ ನೀಡಬಾರದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದರು.

ನಗರದಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ಜನತೆ ಕೆಟ್ಟವರಿದ್ದಾರೆಯೇ? ಕಾಂಗ್ರೆಸ್ ಸರ್ಕಾರ ಆಡಳಿತ ಮಾಡಿಲ್ಲವೇ? ಚುನಾವಣೆ ಮಾಡಿಲ್ಲವೇ? ಶಾಂತಿ ಪ್ರಿಯ ಕರ್ನಾಟಕದಲ್ಲಿ ಅಮಿತ್ ಶಾ ನೀಡುತ್ತಿರುವ ಪ್ರಚೋದನಾತ್ಮಕ ಹೇಳಿಕೆಗಳನ್ನು ನಿಲ್ಲಿಸಬೇಕು ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ, ಅಮಿತ್​ ಶಾ ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಪ್ರಚಾರ ಮಾಡುವುದನ್ನು ಗಮನಿಸಿದರೆ ಅವರು ಹತಾಶರಾಗಿದ್ದು, ಮೋದಿ ಹಾಗೂ ಅಮಿತ್​ ಶಾ ಅವರನ್ನು ನೋಡಿ ಮತ ನೀಡಿ ಎಂದು ಬಸವರಾಜ ಬೊಮ್ಮಾಯಿ ಕೂಡಾ ಕೇಳುತ್ತಿದ್ದಾರೆ. ನೀವೇನು ಮಾಡಿದ್ದೀರಿ? ಎಂಬುದನ್ನು ಜನ ಕೇಳುತ್ತಿದ್ದಾರೆ. ಅಭಿವೃದ್ಧಿ ಕೆಲಸ ನೋಡಿ ಮತ ಕೇಳಿ. ಹೆಸರು ಹೇಳಿ ಮತ ಕೇಳುವುದಲ್ಲ ಎಂದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಅನೇಕ ನ್ಯೂನ್ಯತೆಗಳು ರಾಜ್ಯದಲ್ಲಿವೆ-ಮಲ್ಲಿಕಾರ್ಜುನ ಖರ್ಗೆ:ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್​, ಸಿಲಿಂಡರ್ ದರ ಗಗನಕ್ಕೆ ಏರಿದ್ದು, ಬಿಜೆಪಿ ದುರಾಡಳಿತಕ್ಕೆ ರಾಜ್ಯದ ಜನರು ಬೇಸತ್ತು ಹೋಗಿದ್ದಾರೆ. ಒಂದು ಕಡೆ ಭ್ರಷ್ಟಾಚಾರ, ಇನ್ನೊಂದು ಕಡೆ ನಿರುದ್ಯೋಗ ತಾಂಡವವಾಡುತ್ತಿದೆ. ಅನೇಕ ನ್ಯೂನ್ಯತೆಗಳು ಈ ರಾಜ್ಯದಲ್ಲಿ ಇವೆ. ಬಿಜೆಪಿ ಸರ್ಕಾರ ತೆಗೆದು ಹಾಕಲು ಜನರು ತೀರ್ಮಾನ ಮಾಡಿದ್ದಾರೆ.

ರಾಜ್ಯದಲ್ಲಿ ಜನ ಬದಲಾವಣೆ ಬಯಸಿದ್ದು, ಕಾಂಗ್ರೆಸ್ ಅಲೆ ಎಲ್ಲೆಡೆ ಹಬ್ಬಿದೆ ಎಂದ ಅವರು, ಈ ಬಾರಿ ಜನತೆ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದು, ಚುನಾವಣೆಯಲ್ಲಿ ಬಹಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ :ಸಿದ್ದರಾಮಯ್ಯ ವರುಣಾ ಕ್ಷೇತ್ರ ಅಭಿವೃದ್ಧಿ ಮಾಡಿದ್ದರೆ ಕೈ ಮುಗಿದು ನಾ ಹೊರಟು ಹೋಗುವೆ: ವಿ ಸೋಮಣ್ಣ ವ್ಯಂಗ್ಯ

ಮೋದಿ-ಅಮಿತ್ ಶಾ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿದ್ದಾರೆ: ಒಂದೇ ಒಂದು ಶಬ್ಧ ಉಪಯೋಗ ಮಾಡಿದ್ದಕ್ಕೆ ರಾಹುಲ್ ಗಾಂಧಿಯವರನ್ನು ಸಂಸತ್​ನಿಂದ ಉಚ್ಚಾಟನೆ ಮಾಡಿದ್ರು. ಈ ಪ್ರಜಾಪ್ರಭುತ್ವದಲ್ಲಿ ಅಧಿಕಾರವನ್ನ ನರೇಂದ್ರ ಮೋದಿ, ಅಮಿತ್​ ಶಾ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇವರು ರೈತರ ಪರವಾಗಿಲ್ಲ, ಬಡವರಿಗೆ ಕುಡಿಯುವ ನೀರಿಲ್ಲ, ಭ್ರಷ್ಟಾಚಾರದಲ್ಲಿ ಈ‌ ಸರ್ಕಾರ ಮುಳುಗಿದೆ. ಈ‌ ಎಲ್ಲಾ ವಿಷಯಗಳನ್ನ ಇಟ್ಟುಕೊಂಡು ಜನರ ಬಳಿ ಹೋಗುತ್ತಿದ್ದೇವೆ ಎಂದು ಎಐಸಿಸಿ ಅಧ್ಯಕ್ಷರು ಹೇಳಿದ್ರು.

ಏಪ್ರಿಲ್​ 25 ರಂದು ಬಾಗಲಕೋಟೆ ಜಿಲ್ಲೆಯ ತೇರದಾಳ ಮತ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅಮಿತ್​ ಶಾ ಅವರು, ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದ್ರೆ ಅಭಿವೃದ್ಧಿ ಕೆಲಸಗಳು ರಿವರ್ಸ್​ ಗೇರ್​​ನಲ್ಲಿ ಹೋಗುತ್ತವೆ. ರಾಜ್ಯದಲ್ಲಿ ದಂಗೆಗಳಾಗುತ್ತವೆ, ಅಭಿವೃದ್ಧಿ ಕುಂಠಿತವಾಗುತ್ತದೆ ಎಂದು ಟೀಕಿಸಿದ್ದರು.

ಇದನ್ನೂ ಓದಿ :ಕಾಂಗ್ರೆಸ್​ನವರಿಂದ‌ ಲಿಂಗಾಯತರಿಗೆ ಮೇಲಿಂದ ಮೇಲೆ ಅಪಮಾನವಾಗುತ್ತಿದೆ: ಅಮಿತ್​ ಶಾ

Last Updated : Apr 26, 2023, 8:20 PM IST

ABOUT THE AUTHOR

...view details