ಕರ್ನಾಟಕ

karnataka

ETV Bharat / state

ಉಪ ಚುನಾವಣೆಗೆ ಸ್ಪರ್ಧೆ ಮಾಡಿರುವವರೆಲ್ಲಾ ಬೆನ್ನಿಗೆ ಚೂರಿ ಹಾಕಿದವರು: ಅನರ್ಹರ ವಿರುದ್ಧ ಕೆಸಿವಿ ಕಿಡಿ - venugopal pressmeet in hubli latest news

ಹುಬ್ಬಳ್ಳಿಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅನರ್ಹರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

kcv
ಅನರ್ಹರ ವಿರುದ್ಧ ಕೆಸಿವಿ ಕಿಡಿ

By

Published : Dec 1, 2019, 11:45 PM IST

ಹುಬ್ಬಳ್ಳಿ:ಸದ್ಯ ಬಿಜೆಪಿಯಿಂದ ಉಪಚುನಾವಣೆಗೆ ಸ್ಪರ್ಧೆ ಮಾಡಿರುವವರೆಲ್ಲಾ ಬೆನ್ನಿಗೆ ಚೂರಿ ಹಾಕಿದವರು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅನರ್ಹರ ವಿರುದ್ಧ ಕಿಡಿಕಾರಿದರು.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.5 ಕರ್ನಾಟಕಕ್ಕೆ ಮಹತ್ವದ ದಿನವಾಗಿದೆ. ಬೆನ್ನಿಗೆ ಚೂರಿ ಹಾಕಿದವರಿಗೆ ಜನತೆಯೇ ಪಾಠ ಕಲಿಸುವ ದಿನವಾಗಿದೆ ಎಂದರು. ನಿಮಗೆಲ್ಲಾ ಗೊತ್ತಿದೆ ಅವರೆಲ್ಲಾ ಮೈತ್ರಿ ಸರ್ಕಾರವನ್ನ ಕೆಡವಿದ್ದರು. ಅದನ್ನು ಸ್ವತಃ ಸಿಎಂಹುಬ್ಬಳ್ಳಿಯಲ್ಲೇಹೇಳಿದ್ದಾರೆ. ಆಪರೇಷನ್ ಕಮಲದ ಹಿಂದೆ ಅಮಿತ್ ಶಾ ಇದ್ದಾರೆ ಎಂದು. ಆಪರೇಷನ್ ಕಮಲದಿಂದಲೇ ಅಧಿಕಾರ ಬಂದಿದೆ ಅಂತ ಎಂದು ಅಸಮಾಧಾನ ಹೊರಹಾಕಿದರು.

ಸದ್ಯ ಅವರಿಗೆ ಟಿಕೆಟ್ ನೀಡಿ ಬಿಜೆಪಿ ಅವಕಾಶ ನೀಡಿದೆ. ಇದು ಪ್ರಜಾಭುತ್ವದ ಕಗ್ಗೊಲೆ ಎಂದು ಕಿಡಿಕಾರಿದ ಅವರು, ನನಗೆ 100 ಕ್ಕೆ 100 ರಷ್ಟು ವಿಶ್ವಾಸವಿದೆ.15 ಕ್ಕೆ 15 ಕ್ಷೇತ್ರಗಳನ್ನ ಗೆಲ್ಲುತ್ತೇವೆ. ಮೊನ್ನೆ ಮಹಾರಾಷ್ಟ್ರದಲ್ಲಿ ಏನು ಮಾಡಿದ್ದರು ಅಂತ ಇಡೀ ದೇಶಕ್ಕೆ ಗೊತ್ತಿದೆ. ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲೆ ಈ ರೀತಿ ಎಂದೂ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬಿಜೆಪಿಯವರಿಗೆ ನಾಚಿಕೆಯಾಗಬೇಕು. ಇಲ್ಲಿಯೂ ಕೂಡಾ ಅದನ್ನೇ ಮಾಡಲು ಹೊರಟ್ಟಿದ್ದಾರೆ. ಕುದುರೆ ವ್ಯಾಪಾರ ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಡಿ.5 ಕ್ಕೆ ಬಿಎಸ್​ವೈಗೆ ಗೊತ್ತಾಗುತ್ತೆ. ರಾಜ್ಯದ ಜನತೆ ಕರ್ನಾಟಕದ ಅನೈತಿಕ ರಾಜಕಾರಣವನ್ನು ಸ್ವಚ್ಛಗೊಳಿಸುತ್ತಾರೆ ಆ ವಿಶ್ವಾಸ ನಮಗಿದೆ. ಡಿ.5 ರ ನಂತರ ಬಿಎಸ್ ವೈ ಸರ್ಕಾರ ಸಂಕಷ್ಟಕ್ಕೆ ಸಿಲುಕಲಿದೆ ಎಂದ್ರು.

ಅನರ್ಹರ ವಿರುದ್ಧ ಕೆಸಿವಿ ಕಿಡಿ

ಬೈ ಎಲೆಕ್ಷನ್ ನಂತರ ಮತ್ತೆ ಜೆಡಿಎಸ್ ಜೊತೆ ಮೈತ್ರಿ ವಿಚಾರವಾಗಿ ಮಾತನಾಡಿದ ಅವರು, ನಮಗೆ ಅವಕಾಶ ತೆರೆದೆ ಇದೆ, ಏನಾದರು ಆಗಬಹುದು. ಆದರೆ ನೆರೆ ಬಂದಾಗ ಬಿಜೆಪಿ ಸರ್ಕಾರ ಏನು ಮಾಡಿದೆ?. ಕೇಂದ್ರ ಕರ್ನಾಟಕಕ್ಕೆ ನೆರೆ ವಿಚಾರದಲ್ಲಿ ಸಹಾಯವೇ ಮಾಡಿಲ್ಲ ಎಂದು ಆರೋಪಿಸಿದರು.

For All Latest Updates

ABOUT THE AUTHOR

...view details