ಕರ್ನಾಟಕ

karnataka

ETV Bharat / state

ನಾನು ಸುಳ್ಳು ಆಶ್ವಾಸನೆ ಕೊಟ್ಟು ಹೋಗುವ ಸಚಿವನಲ್ಲ: ಬಿ.ಸಿ. ಪಾಟೀಲ್ - ಸಚಿವ ಬಿ.ಸಿ. ಪಾಟೀಲ್

ಮಾರ್ಚ್​ 5 ರಂದು ಮಂಡನೆಯಾಗುವ ಬಜೆಟ್ ರೈತ ಪರ ಆಗಿರಲಿದೆ. ರೈತರು ಬೆಳೆದಂತಹ ಬೆಳೆಗೆ ಸೂಕ್ತ ಬೆಲೆ ಸಿಗಬೇಕಾಗಿದೆ. ಬಜೆಟ್​ನಲ್ಲಿ ರೈತ ಪರ ಯೋಜನಗಳು ಇರಲಿದೆ ಎಂದು ಕೃಷಿ ಸಚಿ ಬಿ.ಸಿ ಪಾಟೀಲ್​ ತಿಳಿಸಿದ್ದಾರೆ.

BC Patil
ಸಚಿವ ಬಿ.ಸಿ. ಪಾಟೀಲ್

By

Published : Mar 1, 2020, 7:48 PM IST

ಹುಬ್ಬಳ್ಳಿ: ರೈತರ ಸಮಸ್ಯೆಗಳನ್ನ ಕೇಳಿ ಸಲಹೆ ಸೂಚನೆಗಳನ್ನ ಪಡೆಯುತ್ತಿದ್ದೇನೆ. ಕೃಷಿ ಹೊಂಡಗಳ ನಿರ್ಮಾಣ ಯೋಜನೆ ಸ್ಥಗಿತಗೊಳಿಸಲ್ಲ. ನಾನು ಸುಳ್ಳು ಆಶ್ವಾಸನೆ ಕೊಟ್ಟು ಹೋಗುವ ಸಚಿವನಲ್ಲ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.

ನಾನು ಸುಳ್ಳು ಆಶ್ವಾಸನೆ ಕೊಟ್ಟು ಹೋಗುವ ಸಚಿವನಲ್ಲ : ಸಚಿವ ಬಿ.ಸಿ. ಪಾಟೀಲ್

ರೈತರ ಕಣ್ಣೀರನ್ನ ಒರೆಸುವ ಕೆಲಸವಾಗಬೇಕಿದೆ. ಎಲ್ಲಾ ಜಿಲ್ಲೆಗಳ ಕೃಷಿ‌ ನಿರ್ದೇಶಕರ ಸಭೆ ನಡೆಸಿರುವೆ.‌ ರೈತರಿಗೆ ಸರ್ಕಾರ ರೂಪಿಸಿರುವ ಯೋಜನೆಗಳ ರೈತರಿಗೆ ತಲುಪಬೇಕಿದೆ. ಕೃಷಿ ಲಾಭದಾಯಕವಲ್ಲ ಅನ್ನೋ ಹಂಗಾಗಿದೆ. ಕೃಷಿ ಲಾಭದಾಯಕವಾಗುವ ನಿಟ್ಟಿನಲ್ಲಿ ಕೆಲಸ ಮಾಡುವೆ. ಬ್ಯಾಂಕ್​ನಲ್ಲಿ ರೈತರಿಗೆ ಸಾಲ ಕೊಡಲು ಕ್ರೇಡಿಟ್ ಸ್ಕೋರ್ ನೋಡಿ ಸಾಲ ಕೊಡುವ ಆರೋಪ ಕೇಳಿ ಬಂದಿದೆ. ರೈತರ ಬೆಳೆದಂತಹ ಬೆಳೆಗೆ ಸೂಕ್ತ ಬೆಲೆ ಸಿಗಬೇಕಾಗಿದೆ. ಬಜೆಟ್​ನಲ್ಲಿ ರೈತ ಪರ ಯೋಜನಗಳು ಇರಲಿದೆ. ಮಾರ್ಚ್​ 5 ರಂದು ಮಂಡನೆಯಾಗುವ ಬಜೆಟ್ ರೈತ ಪರ ಆಗಿರಲಿದೆ ಎಂದು ತಿಳಿಸಿದರು.

ಎಪಿಎಂಸಿಗಳು ರೈತ ಪರವಾಗಿ ಕೆಲಸ ಮಾಡುತ್ತಿಲ್ಲ. ಆನ್​ಲೈನ್ ಮಾರ್ಕೆಟ್​ಗೆ ನಮ್ಮ ಸರ್ಕಾರ ಬೆಂಬಲ ನೀಡಲಿದೆ. ರೈತ ನಿರಂತರವಾಗಿ ಶೋಷಣೆಗೆ ಒಳಗಾಗುತ್ತಿದ್ದಾನೆ. ರೈತರಿಗೆ ಅನ್ಯಾಯವಾಗಲು ನಮ್ಮ ಸರ್ಕಾರ ಬಿಡಲ್ಲ. ಕೃಷಿ‌ ಇಲಾಖೆಯಲ್ಲಿ‌ ಶೇಕಡಾ 50 ರಷ್ಟು ಹುದ್ದೆಗಳು ಖಾಲಿಯಾಗಿವೆ. ಇಲಾಖೆಯಲ್ಲಿ ಖಾಲಿ ಹುದ್ದೆಗಳನ್ನ ತುಂಬಲು ಮೊದಲ ಆದ್ಯತೆ ನೀಡುವೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡಿದಾಗ ಮಾತ್ರ ಆಡಳಿತ ನಡೆಸಲು ಅನೂಕೂಲವಾಗಲಿದೆ ಎಂದರು.

ABOUT THE AUTHOR

...view details