ಧಾರವಾಡ:ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ಪ್ರವಾಹದಿಂದ ಮುಂದೂಡಲಾಗಿದ್ದ ಕೃಷಿ ವಿಶ್ವವಿದ್ಯಾಲಯದ ಕೃಷಿ ಮೇಳ ಜ.18ರಿಂದ 20 ರವರೆಗೆ ನಡೆಯಲಿದ್ದು, ಪ್ರತಿ ಹನಿ-ಸಮೃದ್ಧ ತೆನಿ ಎಂಬ ಘೋಷವಾಕ್ಯದಲ್ಲಿ ಮೇಳ ಆಯೋಜನೆ ಮಾಡಲಾಗುತ್ತಿದೆ ಎಂದು ವಿವಿ ಕುಲಪತಿ ಮಹಾದೇವ ಚಟ್ಟಿ ತಿಳಿಸಿದರು.
ಧಾರವಾಡದಲ್ಲಿ ಜ.18ರಿಂದ ಕೃಷಿ ಮೇಳ ಆರಂಭ, ಕೃಷಿ ವಿವಿ ಕುಲಪತಿ ಮಹಾದೇವ ಚಟ್ಟಿ - ಕೃಷಿ ವಿಶ್ವವಿದ್ಯಾಲಯದ ಕೃಷಿ ಮೇಳ
ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ಮೇಳ ಜ.18 ರಿಂದ ಆರಂಭವಾಗಲಿದ್ದು, ಮೂರು ದಿನಗಳ ಕಾಲ ರೈತ ಜಾತ್ರೆ ನಡೆಯಲಿದೆ.
ನಗರದ ಕೃಷಿ ವಿವಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಮೇಳವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ಕೇಂದ್ರ ರೈಲ್ವೆ ಸಚಿವ ಸುರೇಶ್ ಅಂಗಡಿ, ಡಿಸಿಎಂಗಳು ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಮೇಳದಲ್ಲಿ ನೂರಾರು ಕೃಷಿ ಉಪಯೋಗಿ ವಸ್ತುಗಳು, ಕೃಷಿಗೆ ಬೇಕಾಗುವ ಆಧುನಿಕ ತಂತ್ರಜ್ಞಾನದ ವಸ್ತುಗಳು ಸೇರಿದಂತೆ ಇನ್ನಿತರ ಉತ್ಪನ್ನಗಳ ಕಂಪನಿಗಳು ಭಾಗವಹಿಸಲಿವೆ. ಹಲವು ಯಂತ್ರೋಪಕರಣ ತಯಾರಿಕಾ ಕಂಪನಿಗಳು ಆಗಮಿಸಲಿದ್ದು, ಉತ್ತರ ಕರ್ನಾಟಕದ ಏಳು ಜಿಲ್ಲೆಯ ರೈತರು ಕೃಷಿ ಮೇಳಕ್ಕೆ ಆಗಮಿಸುತ್ತಿದ್ದಾರೆ. ಇದರ ಜೊತೆಗೆ ಫಲಪುಷ್ಪ ಪ್ರದರ್ಶನ, ಜಾನುವಾರು ಪ್ರದರ್ಶನ, ಸೇರಿದಂತೆ ವಿವಿಧ ಪ್ರದರ್ಶನಗಳು ನಡೆಯುತ್ತವೆ ಎಂದು ಮಾಹಿತಿ ನೀಡಿದರು.