ಹುಬ್ಬಳ್ಳಿ : ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿ ಗೆಲುವ ಸಾಧಿಸುತ್ತಾರೆ. ದೇಶದಲ್ಲಿ ವಿರೋಧ ಪಕ್ಷಗಳನ್ನು ಮುಗಿಸುವ ಕೆಲಸ ಬಿಜೆಪಿ ಮಾಡುತಿದೆ ಎಂದು ಕೇಂದ್ರದ ಮಾಜಿ ಸಚಿವೆ ಮಾರ್ಗರೇಟ್ ಆಳ್ವಾ ಕಿಡಿಕಾರಿದರು.
ಚುನಾವಣೆ ಬಳಿಕವು ರಾಜ್ಯದಲ್ಲಿ ಮೈತ್ರಿ ಸರ್ಕಾರವಿರುತ್ತೆ, ನಿಮ್ಮ ಕನಸು ನನಸಾಗುವುದಿಲ್ಲ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ನೀತಿ ಸಂಹಿತೆ ಉಲ್ಲಂಘನೆ ಮಾಡುತಿದ್ದಾರೆ. ನರೇಂದ್ರ ಮೋದಿ ದಬ್ಬಾಳಿಕೆ ಹೆದರಿಕೆ ಬೆದರಿಕೆ ಹಾಕಿ ಚುನಾವಣೆ ಮಾಡುತಿದ್ದಾರೆ. ಆದ್ರೂ ಚುನಾವಣಾ ಆಯೋಗ ಕಣ್ಣುಮುಚ್ಚಿ ಕುಳಿತಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಕೊಟ್ಟರೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದರು.
ವಿರೋಧ ಪಕ್ಷಗಳು ಮಾತ್ರ ಚುನಾವಣೆಗೆ ಹಣ ಖರ್ಚು ಮಾಡುತ್ತಿದ್ದಾರೆಯೇ, ಬಿಜೆಪಿಯವರು ಹಣ ಖರ್ಚುೇ ಮಾಡುತಿಲ್ವೇ ಅಂತಾ ಪ್ರಶ್ನಿಸಿದ ಅವರು, ಹೀಗಿದ್ರೂ ಕೂಡಾ ಅವರು ಚುನಾವಣೆ ಮಾಡುತ್ತಿದ್ದಾರೆ. ಅದು ಹೇಗೆ ಅವರಿಗೆ ದೊಡ್ಡ ದೊಡ್ಡ ಸಮಾವೇಶ ಮಾಡಲು ವಸ್ತುಗಳು ಎಲ್ಲಿಂದ ಬರುತ್ತಿವೆ ಎಂದು ಪ್ರಶ್ನಿಸಿದರು.
ದೇಶದಲ್ಲಿ ಮೋದಿ ಹಾಗೂ ಬಿಜೆಪಿಯನ್ನು ವಿರೋಧಿಸುವವರು ಮಾತ್ರ ಭ್ರಷ್ಟರು. ಮೋದಿ ಮಾತ್ರ ಚೌಕಿದಾರ್ ಎಂದು ಬಿಂಬಿಸಲಾಗುತ್ತಿದೆ ಎಂದರು. ಲೋಕಸಭಾ ಚುನಾವಣೆ ಮುಗಿದ ಬಳಿಕವೂ ರಾಜ್ಯದಲ್ಲಿ ಮೈತ್ರಿ ಸರ್ಕಾರ ಭದ್ರವಾಗಿರುತ್ತದೆ. ಬಿಜೆಪಿ ಹಾಗೂ ಯಡಿಯೂರಪ್ಪ ಹಗಲು ಕನಸು ಕಾಣುತ್ತಾರೆ. ಅವರ ಕನಸು ನನಸಾಗುವದಿಲ್ಲ ಎಂದರು.