ಹುಬ್ಬಳ್ಳಿ: ಸಣ್ಣ ನೀರಾವರಿ ಇಲಾಖೆಯ ಇಇ ದೇವರಾಜ ಕೆ. ಶಿಗ್ಗಾಂವಿ ಅವರ ನಿವಾಸ ಮತ್ತು ತಾಯಿ ಹಾಗೂ ಮಾವನ ಮನೆಯ ಮೇಲೆ ಎಸಿಬಿ ಅಧಿಕಾರಿಗಳು ಇಂದು ಬೆಳಗ್ಗೆ ಏಕಕಾಲಕ್ಕೆ ದಾಳಿ ಮಾಡಿ, ಆದಾಯಕ್ಕಿಂತ ಹೆಚ್ಚಿನ ಸ್ಥಿರ-ಚರಾಸ್ತಿಯ ದಾಖಲಾತಿಗಳನ್ನು ಪರಿಶೀಸಿದ ಬಳಿಕ ಲಾಕರ್ ಪರಿಶೀಲನೆಗೆ ದೇವರಾಜ ಶಿಗ್ಗಾಂವಿಯನ್ನು ಕರೆದೊಯ್ದಿದ್ದಾರೆ.
ಎಸಿಬಿ ದಾಳಿ : ಎಇಇ ದೇವರಾಜ ಕೆ. ಶಿಗ್ಗಾಂವಿ ಲಾಕರ್ನಲ್ಲಿ ಸಿಕ್ಕ ಹಣ, ಆಭರಣವೆಷ್ಟು..? - ಎಇಇ ದೇವರಾಜ ಕೆ. ಶಿಗ್ಗಾವಿ ಲಾಕರ್ ಸೀಜ್
ಸಣ್ಣ ನೀರಾವರಿ ಇಲಾಖೆಯ ಇಇ ದೇವರಾಜ ಕೆ. ಶಿಗ್ಗಾಂವಿ ನಿವಾಸ ಮತ್ತು ತಾಯಿ ಹಾಗೂ ಮಾವನ ಮನೆಯ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು ಅಪಾರ ಪ್ರಮಾಣದ ಅಕ್ರಮ ಆಸ್ತಿ ಪತ್ತೆಯಾಗಿದೆ.

ಎಸಿಬಿ ದಾಳಿ
ಇಂಡಿಯನ್ ಓವರ್ ಸಿಸ್ ಬ್ಯಾಂಕ್ ಲಾಕರ್ ಪರಿಶೀಲನೆಯಲ್ಲಿ ಕಂತೆ ಕಂತೆ ಹಣ ಹಾಗೂ ಬಂಗಾರದ ಆಭರಣಗಳು ಪತ್ತೆಯಾಗಿವೆ. 56.5 ಲಕ್ಷ ಹಣ ಹಾಗೂ 400 ಗ್ರಾಂ. ಬಂಗಾರದ ಆಭರಣಗಳು, 400 ಗ್ರಾಂ ಬೆಳ್ಳಿ ವಸ್ತುಗಳು ಹಾಗೂ 23 ಎಕರೆ ಆಸ್ತಿ ದಾಖಲೆ ಪತ್ರಗಳು ಪತ್ತೆಯಾಗಿದ್ದು, ಅಧಿಕಾರಿಗಳು ತನಿಖೆಯನ್ನು ಮುಂದುವರೆಸಿದ್ದಾರೆ.
ಓದಿ : ಸಿಸಿಬಿ ವಶದಲ್ಲಿದ್ದ ಐಷಾರಾಮಿ ಕಾರು ನಾಪತ್ತೆ: ಅಧಿಕಾರಿಯೇ ಮಾರಾಟ ಮಾಡಿರುವ ಶಂಕೆ!
Last Updated : Feb 2, 2021, 3:06 PM IST