ಕರ್ನಾಟಕ

karnataka

ETV Bharat / state

ಪಾಕ್​ ಪರ ಘೋಷಣೆ ಪ್ರಕರಣ: ಆರೋಪಿಗಳ ಪರ ಜಾಮೀನು ಅರ್ಜಿ ಸಲ್ಲಿಸಲು ಬಂದಿದ್ದ ವಕೀಲರ ಕಾರು ಜಖಂ - Dharawad district court

ಧಾರವಾಡ ಜಿಲ್ಲಾ ನ್ಯಾಯಾಲಯದಲ್ಲಿ ಇಂದು ದೇಶದ್ರೋಹದ ಪ್ರಕರಣದಡಿ ಜೈಲು ಸೇರಿಸುವ ಆರೋಪಿಗಳ ಪರವಾಗಿ ಜಾಮೀನು ಅರ್ಜಿ ಸಲ್ಲಿಸಲು ಬೆಂಗಳೂರಿನಿಂದ ಬಂದಿದ್ದ ಕೆಲ ವಕೀಲರು ಅರ್ಜಿ ಸಲ್ಲಿಸದೇ ವಾಪಸ್​ ತೆರಳಿದರು. ಈ ವೇಳೆ ಅವರ ಕಾರುಗಳನ್ನು ಕಿಡಿಗೇಡಿಗಳು ಜಖಂಗೊಳಿಸಿದ್ದಾರೆ.

Advocates return
ಕಾರು ಜಖಂ

By

Published : Feb 24, 2020, 5:25 PM IST

ಧಾರವಾಡ: ಹುಬ್ಬಳ್ಳಿಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿ ಜೈಲು ಸೇರಿರುವ ಕಾಶ್ಮೀರಿ ಯುವಕರ ಪರ ಜಾಮೀನು ಅರ್ಜಿ ಸಲ್ಲಿಸಿಲು ಬೆಂಗಳೂರಿನಿಂದ ಕೆಲ ವಕೀಲರು ಬಂದಿದ್ದರು. ಈ ವೇಳೆ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಪಾಕ್​ ಪರ ಘೋಷಣೆ ಕೂಗಿದ್ದ ಕಾಶ್ಮೀರಿ ಯುವಕರ ಪರ ಅರ್ಜಿ ಸಲ್ಲಿಸಲು ಬಂದಿದ್ದ ವಕೀಲರು ಬೆಂಗಳೂರಿಗೆ ವಾಪಸ್​

ವಕೀಲರು ಕೋರ್ಟ್ ಆಡಳಿತಾಧಿಕಾರಿಗೆ ಅರ್ಜಿ ಸಲ್ಲಿಸದೇ ನೇರವಾಗಿ ಬಂದ ಹಿನ್ನೆಲೆ ನ್ಯಾಯಾಧೀಶರು ಅರ್ಜಿಯನ್ನು ಮರಳಿಸಿದ್ದಾರೆ. ಆರೋಪಿಗಳ ಪರ ವಕೀಲರು ಮೊದಲು ಆಡಳಿತಾಧಿಕಾರಿಗೆ ಜಾಮೀನು ಅರ್ಜಿ ಸಲ್ಲಿಸಬೇಕಿತ್ತು. ಇವರು ಮೊದಲೇ ಅರ್ಜಿ ಸಲ್ಲಿಸದ ಕಾರಣ ಖಾಲಿ ಕೈಯಲ್ಲಿ ವಕೀಲರು ಹಿಂದಿರುಗಿದ್ದಾರೆ.

ವಕೀಲರು ಕೋರ್ಟ್​ನಿಂದ ಹೊರಡುವ ಸಂದರ್ಭದಲ್ಲಿ ಗಲಾಟೆ ನಡೆದಿದೆ. ಇದೇ ಸಂದರ್ಭದಲ್ಲಿ ವಕೀಲರು ಬಂದಿದ್ದ ಕಾರಿನ ಹಿಂಬದಿಯ ಗಾಜು ಪುಡಿ ಪುಡಿಯಾಗಿದೆ. ಸ್ಥಳೀಯ ವಕೀಲರು ಆರೋಪಿಗಳ ಪರ ವಕೀಲರ ಕಾರನ್ನು ಸುತ್ತವರೆದಿದ್ದು ಕಂಡುಬಂತು. ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು.

ABOUT THE AUTHOR

...view details