ಹುಬ್ಬಳ್ಳಿ:ಕೊರೊನಾ ವೈರಸ್ ಹರಡುವಿಕೆ ದಿನೆ ದಿನೇ ಹೆಚ್ಚಾಗುತ್ತಲೇ ಇದೆ. ಆದರೂ ಸರ್ಕಾರ ಆರ್ಥಿಕತೆ ದೃಷ್ಟಿಯಿಂದ ಅನ್ಲಾಕ್ ಮಾಡಿದೆ. ಆದರೆ ಈಗ ಸರ್ಕಾರ ಈ ಹಿಂದೆ ಜಾರಿ ಮಾಡಿದ ಕೆಲವೊಂದು ನಿಮಯಗಳನ್ನು ಕಟ್ಟುನಿಟ್ಟಿನಿಂದ ಪಾಲನೆ ಮಾಡುವಂತೆ ಸೂಚನೆ ನೀಡಿದೆ. ಹೀಗಾಗಿ ಕೊರೊನಾ ನಿಯಂತ್ರಣಕ್ಕೆ ಸಾರ್ವಜನಿಕರ ಸಹಭಾಗಿತ್ವ ಹಾಗೂ ಜಾಗೃತಿ ಅತೀ ಅವಶ್ಯಕವಾಗಿದೆ.
ಕೊರೊನಾ ಕಟ್ಟಿಹಾಕಲು ಪಾಲಿಸಬೇಕಾದ ಜೀವನ ಶೈಲಿಯ ಬಗ್ಗೆ ತಜ್ಞ ವೈದ್ಯರ ಸಲಹೆ - Covid safety
ಕೆಮ್ಮುವಾಗ ಆರೋಗ್ಯಕರ ಅಭ್ಯಾಸಗಳನ್ನು ಅನುಸರಿಸುವುದರಿಂದ ಮತ್ತು ಕೈ ನೈರ್ಮಲ್ಯವನ್ನು ಅಭ್ಯಾಸ ಮಾಡುವುದು ಹೆಚ್ಚಿನ ಪ್ರಯೋಜನವಿದೆ. ಸಾರ್ವಜನಿಕು ಕೂಡ ಇತ್ತೀಚಿಗೆ ಜಾಗೃತರಾಗಿದ್ದು, ತಮ್ಮಷ್ಟಕ್ಕೆ ತಾವೇ ಸ್ವಯಂ ನಿರ್ಬಂಧ ಹಾಕಿಕೊಳ್ಳಬೇಕು ಎಂದು ಸಾರ್ವಜನಿಕರು ಅರಿಯಬೇಕಿದೆ.
![ಕೊರೊನಾ ಕಟ್ಟಿಹಾಕಲು ಪಾಲಿಸಬೇಕಾದ ಜೀವನ ಶೈಲಿಯ ಬಗ್ಗೆ ತಜ್ಞ ವೈದ್ಯರ ಸಲಹೆ Covid-19 latest news](https://etvbharatimages.akamaized.net/etvbharat/prod-images/768-512-8958601-990-8958601-1601204594807.jpg)
ಅನಿವಾರ್ಯವಾಗಿ ಬಸ್, ರೈಲು ಸೇರಿದಂತೆ ಸಂತೆ, ಪೇಟೆಗಳಿಗೆ ಹಾಗೂ ಕೆಲಸ ಕಾರ್ಯಗಳಿಗೆ ತೆರಳುವ ಅನಿವಾರ್ಯತೆ ಇದೆ. ಹೀಗಾಗಿ ಜೀವ ಕೈಯಲ್ಲಿ ಹಿಡಿದು ಓಡಾಡುವ ಜನರು ಹಲವು ಜಾಗೃತ ಕ್ರಮಗಳನ್ನು ಕೈಗೊಳ್ಳುವಂತೆ ತಜ್ಞ ವೈದ್ಯರು ಸಾರ್ವಜನಿಕರಿಗೆ ಸಲಹೆ ನೀಡುತ್ತಿದ್ದಾರೆ. ಯಾವುದಾದರೂ ವಸ್ತುವನ್ನು ಮುಟ್ಟಿದಾಗ ಕೂಡ ಕೊರೊನಾ ವೈರಸ್ ಸೋಂಕು ಆತನಿಗೆ ತಗುಲಿ ಆತ ಅದೇ ಕೈಯಿಂದ ಕಣ್ಣುಗಳು, ಬಾಯಿ ಅಥವಾ ಮೂಗನ್ನು ಸ್ಪರ್ಶ ಮಾಡಿದಾಗ ಅಥವಾ ಕೈ ಮುಂದಿಟ್ಟು ಕೊಂಡು ಉಸಿರಾಡಿದಾಗ ಕೊರೊನಾ ವೈರಸ್ ಗಳು ಸುಲಭವಾಗಿ ಆತನ ದೇಹ ಪ್ರವೇಶ ಮಾಡುತ್ತವೆ.
ಕೊರೊನಾದಿಂದ ಬಚಾವಾಗಲು ಸ್ವಯಂ ನಿಯಂತ್ರಣ ಮಾಡಿಕೊಳ್ಳಲು ವೈದ್ಯರು ಸಲಹೆ ನೀಡುತ್ತಿದ್ದಾರೆ. ಸೋಂಕು ನಿಯಂತ್ರಿಸಲು ಸಾರ್ವಜನಿಕರು ಜನದಟ್ಟಣೆಯ ಪ್ರದೇಶದಿಂದ ದೂರವಿರಬೇಕು. ಕಡ್ಡಾಯವಾಗಿ ಮಾಸ್ಕ್ ಬಳಕೆ, ಆಗಾಗ ಕೈ ತೊಳೆದುಕೊಳ್ಳುವುದನ್ನು ರೂಢಿಸಿಕೊಳ್ಳಬೇಕು. ಕೆಮ್ಮುವಾಗ ಆರೋಗ್ಯಕರ ಅಭ್ಯಾಸಗಳನ್ನು ಅನುಸರಿಸುವುದರಿಂದ ಮತ್ತು ಕೈ ನೈರ್ಮಲ್ಯವನ್ನು ಅಭ್ಯಾಸ ಮಾಡುವುದು ಹೆಚ್ಚಿನ ಪ್ರಯೋಜನವಿದೆ. ಸಾರ್ವಜನಿಕು ಕೂಡ ಇತ್ತೀಚಿಗೆ ಜಾಗೃತರಾಗಿದ್ದು, ತಮ್ಮಷ್ಟಕ್ಕೆ ತಾವೇ ಸ್ವಯಂ ನಿರ್ಬಂಧ ಹಾಕಿಕೊಳ್ಳಬೇಕು ಎಂದು ಸಾರ್ವಜನಿಕರು ಅರಿಯಬೇಕಿದೆ.