ಹುಬ್ಬಳ್ಳಿ: ಸ್ಯಾಂಡಲ್ವುಡ್ ನಟಿ, ಬೆಣ್ಣೆ ನಗರಿಯ ಬೆಡಗಿ ಅದಿತಿ ಪ್ರಭುದೇವ ಮತ್ತು ಶ್ರೀನಿ ಜೊತೆಯಾಗಿ ನಟಿಸಿರುವ ‘ಓಲ್ಡ್ ಮಾಂಕ್’ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ.
ಹುಬ್ಬಳ್ಳಿ ನಗರದ ರೂಪಂ ಸೇರಿದಂತೆ ಬಹುತೇಕ ಎಲ್ಲಾ ಚಿತ್ರಮಂದಿರಗಳಲ್ಲೂ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಮೊದಲ ದಿನವೇ ಸಿನಿಮಾ ವೀಕ್ಷಣೆಗೆ ಅಭಿಮಾನಿಗಳ ದಂಡು ಹರಿದು ಬಂದಿದ್ದು, ಓಲ್ಡ್ ಮಾಂಕ್ ಪ್ರೇಕ್ಷಕರ ಗಮನ ಸೆಳೆದಿದೆ.