ಧಾರವಾಡ: ಕಿಸ್ ಸಿನಿಮಾ ಮೂಲಕ ಮನೆ ಮಾತಾಗಿದ್ದ ನಟಿ ಶ್ರೀಲೀಲಾ ಜಿಲ್ಲೆಗೆ ಆಗಮಿಸಿ ನೂತನ ಜವಳಿ ಅಂಗಡಿಯನ್ನು ಉದ್ಘಾಟಿಸಿದ್ದಾರೆ. ನಗರದ ಟಿಕಾರೆ ರಸ್ತೆಯ ಹನುಮಂತ ದೇವಸ್ಥಾನದ ಹಿಂಭಾಗದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಕಾಂಚಾನ ಎನ್ಎಕ್ಸ್ ಬಟ್ಟೆ ಮಳಿಗಳಿಗೆ ಚಾಲನೆ ನೀಡಿದರು.
ಧಾರವಾಡದಲ್ಲಿ ಜವಳಿ ಅಂಗಡಿ ಉದ್ಘಾಟಿಸಿ ‘ಹೆಚ್ಚಿಗೆ ಮಾತು ಬ್ಯಾಡ’ ಎಂದ ‘ಕಿಸ್’ ನಟಿ ಶ್ರೀಲೀಲಾ - Srilala came to dharwad
ಕಿಸ್ ಸಿನಿಮಾದಿಂದ ಸಿನಿ ಕೆರಿಯರ್ ಆರಂಭಿಸಿದ ನಟಿ ಶ್ರೀಲೀಲಾ ಜವಳಿ ಅಂಗಡಿ ಉದ್ಘಾಟನೆಗೆ ನಗರಕ್ಕೆ ಆಗಮಿಸಿದ್ದರು. ಈ ವೇಳೆ ಮಾತನಾಡಿ, ನಾಡಿನ ಜನತೆಗೆ ದಸರಾ ಹಬ್ಬದ ಶುಭಾಶಯ ತಿಳಿಸಿದ್ದಾರೆ.
ಕಿಸ್’ ನಟಿ ಶ್ರೀಲೀಲಾ
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಡಿನ ಜನತೆಗೆ ನವರಾತ್ರಿ, ದಸರಾ ಶುಭಾಶಯ ತಿಳಿಸಿದರು. ಅಲ್ಲದೆ ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ಕುರಿತು ಪ್ರತಿಕ್ರಿಯಿಸಿ, ನನಗೆ ಗೊತ್ತಿಲ್ಲದ ವಿಚಾರದ ಬಗ್ಗೆ ಮಾತನಾಡುವುದಿಲ್ಲ. ಧಾರವಾಡಕ್ಕೆ ಬರುವಾಗಲೇ ಒಂದು ಹಾಡು ನೆನಪಾಯಿತು ‘ನಂದು ಧಾರವಾಡ ಹೆಚ್ಚಿಗೆ ಮಾತು ಬ್ಯಾಡ’ ಎಂದರು.
ಇದಲ್ಲದೆ ನಮ್ಮ ಮನೆಯಲ್ಲೂ ದೇವಿ ಕೂರಿಸಿದ್ದಾರೆ, ಪೂಜೆ ಮಾಡುತ್ತಿದ್ದೇವೆ. ನಾನೀಗ ಓದಿನ ಬಗ್ಗೆ ಹೆಚ್ಚು ಗಮನ ಕೊಟ್ಟಿದ್ದೇನೆ ಎಂದರು.