ಧಾರವಾಡ: ನಗರದ ಸುಪ್ರಸಿದ್ಧ ಸೋಮೇಶ್ವರ ದೇವಸ್ಥಾನಕ್ಕೆ ನಟಿ ತಾರಾ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಧಾರವಾಡದ ಹೊರವಲಯದ ಲಕಮನಹಳ್ಳಿಯಲ್ಲಿರುವ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದುಕೊಂಡಿದ್ದಾರೆ.
ಧಾರವಾಡ: ಸುಪ್ರಸಿದ್ಧ ಸೋಮೇಶ್ವರ ದೇವಸ್ಥಾನಕ್ಕೆ ನಟಿ ತಾರಾ ಭೇಟಿ, ವಿಶೇಷ ಪೂಜೆ - ಸೋಮೇಶ್ವರ ದೇವಸ್ಥಾನಕ್ಕೆ ನಟಿ ತಾರಾ
ಪ್ರಸಿದ್ಧ ಸೋಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿರುವ ನಟಿ ತಾರಾ, ವಿಶೇಷ ಪೂಜೆ ಸಲ್ಲಿಸಿದ್ದಾರೆಂದು ತಿಳಿದು ಬಂದಿದೆ.
Actor tara
ಅಗಸ್ತ್ಯ ಮಹಾಮುನಿಯ ತಪಸ್ಸಿನಿಂದ ಉದ್ಭವಿಸಿರುವ ಶಿವಲಿಂಗದ ಹಿನ್ನೆಲೆ ಇರುವ ದೇವಸ್ಥಾನ ಇದಾಗಿದ್ದು, ಯಾರಿಗೂ ತಿಳಿಸದೇ ನೇರವಾಗಿ ತಾರಾ ದೇವಸ್ಥಾನಕ್ಕೆ ಬಂದು ಹೋಗಿದ್ದಾರೆ.
ದೇವಸ್ಥಾನದ ಶಿವಲಿಂಗಕ್ಕೆ ತಾರಾ ವಿಶೇಷ ಪೂಜೆ ಸಲ್ಲಿಸಿದ್ದು, ಬಳಿಕ ಸೋಮೇಶ್ವರ ಆವರಣಲ್ಲಿನ ವಿವಿಧ ದೇವರುಗಳಿಗೂ ನಟಿ ಪೂಜೆ ಸಲ್ಲಿಕೆ ಮಾಡಿದ್ದಾರೆ. ಮಧ್ಯಾಹ್ನದ ವೇಳೆ ಆಗಮಿಸಿದ ನಟಿ ತಾರಾ ಅವರು ಸುಪ್ರಸಿದ್ದ ಸೋಮೇಶ್ವರನ ದರ್ಶನ ಪಡೆದುಕೊಂಡು ಪೂಜೆ ಸಲ್ಲಿಸಿ, ವಾಪಸ್ ಹೋಗಿದ್ದಾರೆ ಎನ್ನಲಾಗಿದೆ.