ಅಳ್ನಾವರ: ಕಳೆದ ವರ್ಷ ಪಟ್ಟಣದಲ್ಲಿ ಉಂಟಾದ ಅತಿವೃಷ್ಟಿಗೆ ಬಿದ್ದ ಮನೆ ನಿರ್ಮಿಸಲು, ಸರ್ಕಾರ ಬಾಕಿ ಉಳಿಸಿಕೊಂಡ ಹಣವನ್ನು ಶೀಘ್ರವಾಗಿ ಅವರ ಖಾತೆಗೆ ಜಮಾ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಸಿ.ಎಂ ನಿಂಬಣ್ಣವರ ಹೇಳಿದರು.
ವಸತಿ ಯೋಜನೆ ಬಾಕಿ ಹಣ ಪಾವತಿಗೆ ಕ್ರಮ: ಶಾಸಕ ನಿಂಬಣ್ಣವರ ಭರವಸೆ - ಅಳ್ನಾವರ
ಅತಿವೃಷ್ಟಿಯಿಂದಾಗಿ ಬಿದ್ದ ಮನೆ ನಿರ್ಮಿಸಲು ಸರ್ಕಾರ ಬಾಕಿ ಉಳಿಸಿಕೊಂಡ ಹಣವನ್ನು ಶೀಘ್ರವಾಗಿ ಅವರ ಖಾತೆಗೆ ಜಮಾ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಸಿ.ಎಂ ನಿಂಬಣ್ಣವರ ಹೇಳಿದರು.
ವಸತಿ ಯೋಜನೆ ಬಾಕಿ ಹಣ ಪಾವತಿಗೆ ಕ್ರಮ: ಶಾಸಕ ನಿಂಬಣ್ಣವರ
ಪಟ್ಟಣ ಪಂಚಾಯತ್ ಸಭಾ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಎ ಮತ್ತು ಬಿ ಕೆಟಗೆರಿಯ 3.05 ಕೋಟಿ ರೂ.ಗಳನ್ನ ತಕ್ಷಣ ನೀಡಲಾಗುವುದು. ಬಾಕಿ ಉಳಿದ ಮನೆ ಬಾಡಿಗೆ ಹಣ ಸಹ ಒದಗಿಸಲಾಗುತ್ತದೆ. ಸಿ ಕೆಟೆಗೆರಿಯ 373 ಫಲಾನುಭವಿಗಳಿಗೆ ತಲಾ 50 ಸಾವಿರ ನೀಡಲಾಗಿದೆ ಎಂದರು.
ಈ ವೇಳೆ, ತಹಶೀಲ್ದಾರ್ ಅಮರೇಶ ಪಮ್ಮಾರ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ವಾಯ್.ಜಿ.ಗದ್ದಿಗೌಡ, ಪಿಎಸ್ಐ ಎಸ್. ಆರ್. ಕಣವಿ, ಕೃಷಿ ಅಧಿಕಾರಿ ಸುನಂದಾ ಸಿತೊಳ್ಳಿ, ಎಂ.ಸಿ. ಹಿರೇಮಠ, ಅಮೂಲ ಗುಂಜೀಕರ, ಶಿವಾಜಿ ಡೊಳ್ಳಿನ, ಅಶೋಕ ಸಾವಂತ ಉಪಸ್ಥಿತರಿದ್ದರು.