ಹುಬ್ಬಳ್ಳಿ/ಧಾರವಾಡ: ಕೊರೊನಾ ಸೋಂಕು ಮನುಷ್ಯರಿಂದ ಸಾಕು ಪ್ರಾಣಿಗಳಿಗೆ ಹರಡುವುದಿಲ್ಲ ಎಂಬುದನ್ನು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಭಾರತೀಯ ಔಷಧ ಅನುಸಂಧಾನ ಪರಿಷತ್‌ನ ಪ್ರಕಟಣೆಯಲ್ಲಿ ತಿಳಿಸಿದೆ. ವೈರಸ್ ಸೊಂಕು ಪೀಡಿತ ಮನುಷ್ಯರಿಂದ ಕೋಳಿ, ಕುರಿ, ಮೇಕೆ, ಹಂದಿ, ದನ ಇತ್ಯಾದಿ ಸಾಕು ಪ್ರಾಣಿಗಳಿಗೆ ಹರಡುವುದಿಲ್ಲ ಎಂದು ದೃಢ ಪಡಿಸಿದೆ. ಈ ಹಿನ್ನೆಲೆ ಸಾಕು ಪ್ರಾಣಿಗಳನ್ನು ಮನೆಯಿಂದ ಹೊರ ಹಾಕುವುದು, ಆಹಾರ ನೀಡಿ ಅವುಗಳನ್ನು ಪೋಷಿಸಬೇಕು ಎಂದು ಮಹಾನಗರ ಪಾಲಿಕೆ ಪ್ರಕಟಣೆಯಲ್ಲಿ ತಿಳಿಸಿದೆ.
ನಗರದಲ್ಲಿ ಲಾಕ್ಡೌನ್ ಇರುವುದರಿಂದ ಬಿಡಾಡಿ ದನಗಳು, ಬೀದಿ ನಾಯಿಗಳು, ಇತರ ಪ್ರಾಣಿ ಪಕ್ಷಿಗಳು ಸಹ ಆಹಾರದ ಕೊರತೆಯಿಂದ ಬಳಲುತ್ತಿವೆ. ಈ ಸಂದರ್ಭದಲ್ಲಿ ಸ್ವಯಂ ಸೇವಾ ಸಂಸ್ಥೆಯ ಸೇವಾದಾರರು , ಸರ್ಕಾರೇತರ ಸೇವಾ ಸಂಸ್ಥೆಗಳ ಪ್ರತಿನಿಧಿಗಳು, ಪ್ರಾಣಿ ಪ್ರಿಯರು ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ 6.00 ರಿಂದ 9.00 ಗಂಟೆಯವರೆಗೆ ಪ್ರಾಣಿ ಪಕ್ಷಿಗಳಿಗೆ ಆಹಾರ, ನೀರು, ಆರೋಗ್ಯ ಸೌಲಭ್ಯಗಳನ್ನು ಒದಗಿಸುಬಹುದು.
ಸಾಕು ಪ್ರಾಣಿಗಳು ಆಹಾರ, ನೀರಿಲ್ಲದೆ ಸತ್ತರೆ ಮಾಲಿಕರ ಮೇಲೆ ಕ್ರಮ- ಮಹಾನಗರ ಪಾಲಿಕೆ ಪ್ರಾಣಿಗಳ ಮಾರಾಟ ವಹಿವಾಟು ನಡೆಸುತ್ತಿರುವವರು ಲಾಕ್ಡೌನ್ ಹಿನ್ನೆಲೆಯಲ್ಲಿ ತಮ್ಮ ಅಂಗಡಿ ಮಳಿಗೆಗಳನ್ನು ತೆರೆದು ಅಲ್ಲಿರುವ ಪ್ರಾಣಿ ಪಕ್ಷಿಗಳಿಗೆ ಆಹಾರ, ನೀರು, ಔಷಧಿ ಮತ್ತು ಇತ್ಯಾದಿಗಳನ್ನು ನೀಡಬಹುದು. ಒಂದು ವೇಳೆ ಮಾರಾಟಗಾರು ಪ್ರಾಣಿಗಳನ್ನು ನಿರ್ಲಕ್ಷಿಸಿ ಅವುಗಳು ಮೃತಪಟ್ಟರೆ, ಪ್ರಾಣಿ ಹಿಂಸಾ ಪ್ರತಿಬಂಧಕ ಕಾಯ್ದೆ 1960ರ ಪರಿಚ್ಛೇಧ 11 ( J ) ರ ಪ್ರಕಾರ ಶಿಕ್ಷೆಗೆ ಅರ್ಹರಾಗುತ್ತಾರೆ.
ಮಳಿಗೆಗಳಲ್ಲಿರುವ ಪ್ರಾಣಿ / ಪಕ್ಷಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ ಅವುಗಳಿಗೆ ನೀರು, ನೆರಳು, ಆಹಾರ , ಮತ್ತು ಔಷಧಗಳನ್ನು ಪೂರೈಸಬೇಕು. ಪ್ರಾಣಿಗಳನ್ನು ಹಿಂಸಿಸುವ ಹಾಗೂ ಕೊಲ್ಲುವವರ ವಿರುದ್ಧ ಐಪಿಸಿ ಕಲಂ 428 ಮತ್ತು 429 ರಂತೆ ಕ್ರಮ ಕೈಗೊಳ್ಳಲಾಗುವುದು. ಪ್ರಾಣಿಗಳಿಗೆ ಆಹಾರ ನೀಡ ಬಯಸುವವರು ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ವಯಕ್ತಿಕ ಪಾಸುಗಳನ್ನು ಪಡೆದುಕೊಳ್ಳಬೇಕು. ಕೋವಿಡ್ - 19 ವೈರಾಣುವಿಗೂ ಕೋವಿಡ್ - 19 ವೈರಾಣುವಿಗೂ ಕುರಿ, ಕೋಳಿ, ಮೀನು,ಮೇಕೆ ಮಾಂಸ ಸೇವನೆಗೂ ಯಾವುದೇ ಸಂಬಂಧವಿಲ್ಲ, ಬೇಯಿಸಿ ಮಾಂಸ ಸೇವಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.