ಕರ್ನಾಟಕ

karnataka

ETV Bharat / state

ನೀರಿನ‌ ಘಟಕಗಳ ಮೇಲೆ ಹದ್ದಿನ ಕಣ್ಣು: ಅಕ್ರಮ ಎಸಗಿದ್ರೆ ದಾಖಲಾಗುತ್ತೆ ಕ್ರಿಮಿನಲ್ ಕೇಸ್! - unauthorized water units

ಜಿಲ್ಲೆಯಲ್ಲಿ ಒಟ್ಟು 19 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಈ ಎಲ್ಲಾ ನೀರಿನ ಘಟಕಗಳು ಗ್ರಾಹಕರಿಗೆ ಶುದ್ಧ ನೀರು ಪೂರೈಕೆ ಮಾಡುತ್ತಿವೆ. ಜಿಲ್ಲೆಯಲ್ಲಿ ಅನಧಿಕೃತ ಹಾಗೂ ಅಶುದ್ಧ ನೀರಿನ ಘಟಕಗಳು ಕಾರ್ಯಾಚರಿಸದಂತೆ ಜಿಲ್ಲಾ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆ ಹದ್ದಿನ‌ ಕಣ್ಣಿಟ್ಟಿದೆ.

Action against unauthorized water units in hubli
ನೀರಿನ‌ ಘಟಕಗಳ ಮೇಲೆ ಹದ್ದಿನ ಕಣ್ಣು: ಅಕ್ರಮ ಎಸಗಿದ್ರೆ ದಾಖಲಾಗುತ್ತೆ ಕ್ರಿಮಿನಲ್ ಕೇಸ್!

By

Published : May 14, 2021, 9:38 AM IST

ಹುಬ್ಬಳ್ಳಿ:ನೀರಿಲ್ಲದೇ ಮನುಷ್ಯ ಸೇರಿದಂತೆ ಒಂದು ಪ್ರಾಣಿ ‌ಪಕ್ಷಿಯೂ ಕೂಡ ಬದುಕಲು ಸಾಧ್ಯವಿಲ್ಲ. ಅದೆಷ್ಟೋ ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿದೆ. ಸದ್ಯ ಈ ಜೀವಜಲ ವಾಣಿಜ್ಯೀಕರಣಗೊಂಡಿದೆ. ನಗರ ಪ್ರದೇಶಗಳಲ್ಲಿ ಶುದ್ಧ ಹಾಗೂ ಪ್ಯಾಕೇಜ್ಡ್ ‌ಕುಡಿಯುವ ನೀರು ಸರಬರಾಜು ಒಂದು ದಂಧೆಯಾಗಿ ಮಾರ್ಪಟ್ಟಿದೆ‌.

ನೀರಿನ‌ ಘಟಕಗಳ ಮೇಲೆ ಹದ್ದಿನ ಕಣ್ಣು: ಅಕ್ರಮ ಎಸಗಿದ್ರೆ ದಾಖಲಾಗುತ್ತೆ ಕ್ರಿಮಿನಲ್ ಕೇಸ್!

ಹೌದು, ಬೇಸಿಗೆ ಸಮಯದಲ್ಲಿ ಶುದ್ಧ ಕುಡಿಯುವ ನೀರಿಗೆ ಇರುವ ಬೇಡಿಕೆಯನ್ನೇ ಕೆಲವರು ಬಂಡವಾಳ ಮಾಡಿಕೊಂಡು ಕಳಪೆ ಹಾಗೂ ಅಶುದ್ಧ ನೀರು ಪೂರೈಕೆ ಮಾಡುವುದು ಅವ್ಯಾಹತವಾಗಿ ನಡೆದುಕೊಂಡು ಬಂದಿದೆ. ಆದ್ರೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಇಂತಹ ಅನಧಿಕೃತ ಹಾಗೂ ಅಶುದ್ಧ ನೀರಿನ ಘಟಕಗಳು ಕಾರ್ಯಾಚರಿಸದಂತೆ ಜಿಲ್ಲಾ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆ ಹದ್ದಿನ‌ ಕಣ್ಣಿಟ್ಟಿದೆ.

ಜಿಲ್ಲೆಯಲ್ಲಿ ಒಟ್ಟು 19 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಈ ಎಲ್ಲಾ ನೀರಿನ ಘಟಕಗಳು ಗ್ರಾಹಕರಿಗೆ ಶುದ್ಧ ನೀರು ಪೂರೈಕೆ ಮಾಡುತ್ತಿವೆ. ನಗರದಲ್ಲಿನ ಖನಿಜಯುಕ್ತ ನೀರು ಮತ್ತು ಶುದ್ಧೀಕರಿಸಿದ ನೀರಿನ ಸ್ಥಾವರಗಳು ನಿಗದಿತ ನಿಯಮಗಳು ಮತ್ತು ಸ್ಥಾಪನೆಗೆ ಸಂಬಂಧಿಸಿದ ಮಾನದಂಡಗಳಿಗೆ ಬದ್ಧವಾಗಿರಬೇಕು. ಕ್ಯಾಲ್ಸಿಯಂ, ಮೆಗ್ನೀಶಿಯಮ್, ಫ್ಲೋರೈಡ್ ಮುಂತಾದ ಖನಿಜಯುಕ್ತ ನೀರಿನ ಪದಾರ್ಥಗಳ ನಿಗದಿತ ಮಾನದಂಡಗಳನ್ನು ಪಾಲಿಸಬೇಕು‌‌. ಪ್ರತಿ ಖನಿಜಯುಕ್ತ ನೀರಿನ ಘಟಕವು ನೀರಿನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪ್ರಯೋಗಾಲಯಗಳಂತಹ ಸೌಲಭ್ಯಗಳನ್ನು ಹೊಂದಿರಬೇಕು.

ನಗರದಲ್ಲಿನ ಖನಿಜಯುಕ್ತ ನೀರಿನ ಮಟ್ಟ ಮತ್ತು ಇತರೆ ಗುಣಗಳನ್ನು ಪರೀಕ್ಷಿಸಿ ನಮೂದಿಸಿಕೊಂಡಿರಬೇಕು‌. ಘಟಕಗಳು ಪ್ರತಿ ದಿನ ಶುದ್ಧೀಕರಿಸಿದ ಮತ್ತು ಖನಿಜಯುಕ್ತ ನೀರಿನ ನಡುವಿನ ವ್ಯತ್ಯಾಸವನ್ನು ನಮೂದಿಸಿಕೊಂಡಿರಬೇಕು ಎಂಬುದನ್ನು ಅಧಿಕಾರಿಗಳು ನಿತ್ಯ ಪರಿಶೀಲನೆ ನಡೆಸುತ್ತಿದ್ದಾರೆ. ಒಂದು‌ ವೇಳೆ ಕಳಪೆ ನೀರು ಪೂರೈಕೆ ‌ಕಂಡು ಬಂದರೆ ಘಟಕ ‌ಸೀಜ್ ಮಾಡುವುದರ ಜತೆಗೆ ಕ್ರಿಮಿನಲ್ ‌ಕೇಸ್ ದಾಖಲಿಸುವುದಾಗಿ ಆಹಾರ ಸುರಕ್ಷತಾ ಅಧಿಕಾರಿ ಡಾ. ದೀಪಕ್ ಕುಮಾರ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.‌

ಪ್ರತಿ ಘಟಕಗಳು ಕಾನೂನು ಬಾಹಿರವಾಗಿ ನೀರು ಸರಬರಾಜು ಮಾಡುವಂತಿಲ್ಲ. ಪ್ರತಿ ಕ್ಯಾನ್​​​ಗಳು ಹಾಗೂ ವಾಟರ್ ಬಾಟಲ್​ಗಳ ಮೇಲೆ FSSI ಹಾಗೂ ISI ಗುರುತು ಇರಬೇಕು. ಸಾರ್ವಜನಿಕರು ಹಾಗೂ ಗ್ರಾಹಕರು ಕೂಡ ಇವೆಲ್ಲ ಮಾನದಂಡಗಳನ್ನು ಪಾಲಿಸುವ ನೀರನ್ನೇ ಬಳಕೆ ಮಾಡಬೇಕು ಎಂಬ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಇಲಾಖೆ ಮಾಡುತ್ತಿದೆ.

ಇದನ್ನೂ ಓದಿ:ಬಿಸಿ ನೀರಿನ ಮೊರೆ ಹೋದ ಜನರು: ಮಡಿಕೆ ವ್ಯಾಪಾರ ಕುಂಠಿತ!

ಅನಧಿಕೃತ ಘಟಕಗಳಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಈವರೆಗೂ ದೂರು ಇಲಾಖೆಗೆ ಬಂದಿಲ್ಲ. ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಮಾಲೀಕರು ಸಂಘ ಕಟ್ಟಿಕೊಂಡು ಅನಧಿಕೃತ ಘಟಕಗಳು ತಲೆಎತ್ತದಂತೆ ನೋಡಿಕೊಳ್ಳುತ್ತಿದ್ದಾರೆ. ಆದ್ರೆ ಇದೀಗ ಲಾಕ್​​ಡೌನ್ ಪರಿಣಾಮ ಅರ್ಧದಷ್ಟು ಘಟಕಗಳು ಸ್ಥಗಿತಗೊಂಡಿವೆ. ಸಭೆ ಸಮಾರಂಭ, ಹೋಟೆಲ್​ಗಳು ಬಂದ್ ಇರುವುದರಿಂದ ಕೆಲವೇ ಘಟಕಗಳು ಮನೆ ಮನೆಗೆ ಶುದ್ಧ ಕುಡಿಯುವ ನೀರಿನ ಬ್ಯಾರೆಲ್ ಸರಬರಾಜು ಮಾಡುತ್ತಿದ್ದಾರೆ ಎನ್ನುತ್ತಾರೆ ಅಧಿಕಾರಿಗಳು.

ABOUT THE AUTHOR

...view details