ಧಾರವಾಡ: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಅನೇಕ ಸಂಘ ಸಂಸ್ಥೆಗಳು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿವೆ. ಈ ಮಧ್ಯೆ ಲಾಠಿ ಹಿಡಿಯಬೇಕಾದ ಎಸಿಪಿ ಕುಂಚ ಹಿಡಿದು ಕೊರೊನಾ ಚಿತ್ರ ಬಿಡಿಸಿ ಜಾಗೃತಿ ಮೂಡಿಸಿದ್ದಾರೆ.
ಲಾಠಿ ಬಿಟ್ಟು ಕುಂಚ ಹಿಡಿದ ಎಸಿಪಿ: ಕೊರೊನಾ ಚಿತ್ರ ಬಿಡಿಸಿ ಜಾಗೃತಿ - Dharwad
ಅಲ್ಲಲ್ಲಿ ಗೋಡೆಗಳ ಮೇಲೆ ಕೊರೊನಾ ಚಿತ್ರ ಬಿಡಿಸಿ ಧಾರವಾಡ ಎಸಿಪಿ ಅನುಷಾ ಅವರು ಕೊರೊನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಕೊರೊನಾ ಚಿತ್ರ ಬಿಡಿಸಿ ಜಾಗೃತಿ ಮೂಡಿಸಿದ ಎಸಿಪಿ
ಹೌದು. ಧಾರವಾಡ ಎಸಿಪಿ ಅನುಷಾ ಅವರು ಕೊರೊನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಜಿಲ್ಲಾಡಳಿತ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಇದರ ಜೊತೆಗೆ ಅನೇಕರು ಅನೇಕ ರೀತಿಯಲ್ಲಿ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಎಸಿಪಿ ಅನುಷಾ ಕೂಡ ಗೋಡೆಯ ಮೇಲೆ ಕೊರೊನಾ ಮಾದರಿಯ ಚಿತ್ರ ಬಿಡಿಸಿ ಗಮನ ಸೆಳೆದಿದ್ದಾರೆ.
ಧಾರವಾಡದ ಅಲ್ಲಲ್ಲಿ ಗೋಡೆಗಳ ಮೇಲೆ ಈ ರೀತಿಯ ಚಿತ್ರ ಬಿಡಿಸಿ ಜಾಗೃತಿ ಮೂಡಿಸಲಾಗುತ್ತಿದೆ. ಇಂದು ಸ್ವತಃ ಎಸಿಪಿ ಅನುಷಾ ಗೋಡೆಯ ಮೇಲೆ ಚಿತ್ರ ಬಿಡಿಸಿ ಕೊರೊನಾ ಕುರಿತು ಜನರಿಗೆ ಜಾಗೃತಿ ಮೂಡಿಸಿದ್ದಾರೆ.