ಹುಬ್ಬಳ್ಳಿ: ಕ್ವಾರಂಟೈನ್ ಕೇಂದ್ರದಲ್ಲಿ ಅರ್ಧ ಬೆಂದಿರುವ ಹಾಗೂ ಕಲಬೆರಕೆ ಆಹಾರವನ್ನು ನೀಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದೆ.
ಹುಬ್ಬಳ್ಳಿ: ಕ್ವಾರಂಟೈನ್ ಕೇಂದ್ರದಲ್ಲಿ ಕಲಬೆರಕೆ ಆಹಾರ ವಿತರಣೆ ಆರೋಪ - ಹುಬ್ಬಳ್ಳಿ ಕ್ವಾರಂಟೈನ್ ಕೇಂದ್ರ
ಕ್ವಾರಂಟೈನ್ ಕೇಂದ್ರದಲ್ಲಿ ಕಳಪೆ ಮಟ್ಟದ ಆಹಾರ ನೀಡುತ್ತಿದ್ದಾರೆಂದು ಕೇಂದ್ರದಲ್ಲಿರುವವರು ಆರೋಪಿಸಿದ್ದು, ಕಳಪೆ ಆಹಾರದ ವಿಡಿಯೋ ಮಾಡಿ ಮಾಧ್ಯಮಕ್ಕೆ ನೀಡಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ಹುಬ್ಬಳ್ಳಿ: ಕ್ವಾರಂಟೈನ್ ಕೇಂದ್ರದಲ್ಲಿ ಕಲಬೆರಕೆ ಆಹಾರ ವಿತರಣೆ ಆರೋಪ
ಹುಬ್ಬಳ್ಳಿಯ ವಿದ್ಯಾನಗರದ ಶಿರೂರ ಪಾರ್ಕ್ನಲ್ಲಿರುವ ಸಂಜೀವಿನಿ ಆಸ್ಪತ್ರೆಯಲ್ಲಿ ಕ್ವಾರಂಟೈನ್‌ನಲ್ಲಿ ಇರುವವವರಿಗೆ ಕಳಪೆ ಆಹಾರ ನೀಡಲಾಗುತ್ತಿದೆ. ಕಲಬೆರಕೆ ಹಾಗೂ ಹುಳು ಮಿಶ್ರಿತ ಆಹಾರವನ್ನು ವಿತರಿಸಲಾಗುತ್ತಿದ್ದು, ಅನ್ನವೂ ಅರ್ಧ ಮಾತ್ರ ಬೆಂದಿದ್ದು, ಇಡ್ಲಿಯ ಜೊತೆಗೆ ಕೊಡುವ ಸಾಂಬರ್‌ನಲ್ಲಿ ಇಲಿಯ ತ್ಯಾಜ್ಯ ಕಂಡು ಬಂದಿದೆ ಎಂದು ಕ್ವಾರಂಟೈನ್ ಕೇಂದ್ರದಲ್ಲಿರುವವರು ಆರೋಪಿಸಿದ್ದಾರೆ. ಕಳಪೆ ಆಹಾರದ ವಿಡಿಯೋ ಮಾಡಿ ಮಾಧ್ಯಮಕ್ಕೆ ನೀಡಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.