ಕರ್ನಾಟಕ

karnataka

ETV Bharat / state

ಸಿವಿಲ್​ ವ್ಯಾಜ್ಯದಲ್ಲಿ ಭಾಗಿಯಾದ ಆರೋಪ: ಗೋಕುಲ್ ರೋಡ್ ಠಾಣೆ ಎಎಸ್​ಐ ಅಮಾನತು - ಗೋಕುಲ್ ರೋಡ್ ಪೊಲೀಸ್ ಠಾಣೆ

ಸಿವಿಲ್ ವ್ಯಾಜ್ಯ ವೊಂದರಲ್ಲಿ ಭಾಗಿಯಾದ ಹಿನ್ನೆಲೆ ಗೋಕುಲ್ ರೋಡ್ ಪೊಲೀಸ್ ಠಾಣೆ ಎಎಸ್​ಐ ಎಂ.ಬಿ.ದಾಸ್ಕೋನವರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಸಿವಿಲ್​ ವ್ಯಾಜ್ಯದಲ್ಲಿ ಭಾಗಿಯಾದ ಆರೋಪ: ಗೋಕುಲ್ ರೋಡ್ ಠಾಣೆ ಎಎಸ್​ಐ ಅಮಾನತು

By

Published : Oct 6, 2019, 4:41 AM IST

ಹುಬ್ಬಳ್ಳಿ: ಸಿವಿಲ್​ ವ್ಯಾಜ್ಯದಲ್ಲಿ ಭಾಗಿಯಾದ ಆರೋಪದ ಮೇಲೆ ಎಎಸ್​ಐ ಯೊಬ್ಬರನ್ನು ಅಮಾನತು ಮಾಡಿ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತ ಆರ್. ದಿಲೀಪ್ ಆದೇಶ ಹೊರಡಿಸಿದ್ದಾರೆ.‌

ಗೋಕುಲ್ ರೋಡ್ ಪೊಲೀಸ್ ಠಾಣೆ ಎಂ.ಬಿ.ದಾಸ್ಕೋನವರ್ ಅಮಾನತಾದ ಎಎಸ್​ಐ. ದಾಸ್ಕೋನವರ್​ ಗೋಕುಲ್ ರೋಡ್ ವ್ಯಾಪ್ತಿಯ ಸಿವಿಲ್ ವ್ಯಾಜ್ಯ ವೊಂದರಲ್ಲಿ ಭಾಗಿಯಾಗಿದ್ದರು. ಈ ಮೂಲಕ ಸುಪ್ರೀಂಕೋರ್ಟ್ ಆದೇಶ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಅವರನ್ನು ಕರ್ತವ್ಯದಿಂದ ಅಮಾನತು ಮಾಡುವಂತೆ ಕಮೀಷನರ್ ಆದೇಶ ಹೊರಡಿಸಿದ್ದಾರೆ.‌

ಇನ್ನೂ ಸಿವಿಲ್ ವ್ಯಾಜ್ಯದಲ್ಲಿ ಕೆಳಮಟ್ಟದ ಅಧಿಕಾರಿಗಳು ಹಸ್ತಕ್ಷೇಪ ಮಾಡಿದಲ್ಲಿ ನೊಂದ ವ್ಯಕ್ತಿಗಳು, ಪಿಐ, ಎಸಿಪಿ ಇಲ್ಲವೇ ನನ್ನ ಗಮನಕ್ಕೆ ತರಬೇಕೆಂದು ಆಯುಕ್ತರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details