ಹುಬ್ಬಳ್ಳಿ: ವೃದ್ಧಾಶ್ರಮದ ಆಸ್ತಿ ಕಬಳಿಸಲು ಮುಂದಾಗಿದ್ದನ್ನು ಪ್ರಶ್ನಿಸಿದ ವ್ಯಕ್ತಿಯ ಕೊಲೆಗೆ ಸುಪಾರಿ ನೀಡಿರುವ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ.
ಕೇಶ್ವಾಪುರದ ಚರ್ಚ್ಗೆ ಸಂಬಂಧಿಸಿದ ವೃದ್ಧಾಶ್ರಮದ ಜಾಗವನ್ನು ಕಬಳಿಸಲು ರಾಜು ಜೋಸೆಫ್ ಎಂಬಾತ ಮುಂದಾಗಿದ್ದ ಎಂದು ಆರೋಪಿಸಲಾಗಿದೆ. ಈತನ ಈ ಅಕ್ರಮದ ವಿರುದ್ದ ಸ್ಟೀಫನ್ ಎಂಬಾತ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾನೆ. ಇದರಿಂದ ರೊಚ್ಚಿಗೆದ್ದ ರಾಜು ಜೋಸೆಫ್, ಸ್ಟೀಫನ್ನನ್ನು ಕೊಲೆ ಮಾಡಲು ಮಹೇಶ ಹಾಗೂ ಇನ್ನೊಬ್ಬನಿಗೆ ಸುಪಾರಿ ನೀಡಿದ್ದಾನೆ ಎಂದು ಸ್ಟೀಫನ್ ಸಂಬಂಧಿಗಳು ಆರೋಪಿಸಿದ್ದಾರೆ.