ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ ಆಟೋ ಚಾಲಕರಿಂದ ಹೆಚ್ಚಿನ ಹಣಕ್ಕೆ ಬೇಡಿಕೆ ಮತ್ತು ಸಂಚಾರಿ ನಿಯಮ ಉಲ್ಲಂಘನೆ ಆರೋಪ ಕೇಳಿ ಬಂದ ಹಿನ್ನೆಲೆ ಆಟೋ ಚಾಲಕರನ್ನು ಹುಬ್ಬಳ್ಳಿಯ ಪೂರ್ವ ಸಂಚಾರಿ ಠಾಣೆಗೆ ಕರೆಸಿ ಪೊಲೀಸರು ಚರ್ಚೆ ನಡೆಸಿದರು.
ಹೆಚ್ಚಿನ ಹಣ ಬೇಡಿಕೆಯಿಡದೆ ಕೇವಲ ಮೀಟರ್ ಹಣವನ್ನು ಮಾತ್ರ ಪಡೆಯಬೇಕು. ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಪೊಲೀಸರು ತಿಳಿಸಿದ್ದಾರೆ.