ಹುಬ್ಬಳ್ಳಿ: ಆತ ನೋಡೋಕೆ ಮಾನಸಿಕ ಅಸ್ವಸ್ಥನಂತೆ ಕಾಣುತ್ತಿದ್ದ. ಇಲ್ಲಿಯೇ ಎಲ್ಲೋ ಭಿಕ್ಷೆ ಬೇಡಿಕೊಂಡು ತಿನ್ನುತ್ತಿದ್ದ ಎಂದುಕೊಂಡಿದ್ದವರಿಗೆ ನಿಜಕ್ಕೂ ಶಾಕ್ ಆಗಿದೆ. ಆ ನರಹಂತಕನ ಬಗ್ಗೆ ಪೊಲೀಸ್ ಆಯುಕ್ತರು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಹುಬ್ಬಳ್ಳಿಯ ಕೃಷ್ಣಭವನದ ಹೋಟೆಲ್ ಮುಂಭಾಗದಲ್ಲಿ ಮಹಿಳೆಯ ಹತ್ಯೆ ಮಾಡಿದ್ದ ಈತ ಎರಡು ವರ್ಷಗಳ ಹಿಂದೆ ಶಹರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮತ್ತೊಂದು ಕೊಲೆ ಮಾಡಿದ್ದನೆಂದು ಪೊಲೀಸ್ ಕಮೀಷನರ್ ಲಾಬುರಾಮ್ ಹೇಳಿದ್ದಾರೆ.
ಧಾರವಾಡ ಮೂಲದವನಾದ ಈತ ಹಣಕ್ಕಾಗಿ ಕೊಲೆ ಮಾಡುತ್ತಿದ್ದ ಎನ್ನಲಾಗ್ತಿದೆ. ಈ ಹಿಂದೆ ಆತ ಮಾಡಿದ ಕೊಲೆಯನ್ನು ಒಪ್ಪಿಕೊಂಡಿದ್ದು, ಮತ್ತಷ್ಟು ವಿವರಗಳ ಬಗ್ಗೆ ವಿಚಾರಣೆ ಮಾಡಲಾಗುತ್ತಿದೆ. ಬೀದಿಯಲ್ಲಿ ಕಸ ಆರಿಸುವ ಹಾಗೂ ಬೀದಿಯಲ್ಲಿ ಜೀವನ ಮಾಡುವವರನ್ನು ಟಾರ್ಗೆಟ್ ಮಾಡುತ್ತಿದ್ದ ಈ ಹಂತಕ ಇನ್ನಷ್ಟು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ. ಆದರೆ, ಪೊಲೀಸ್ ಆಯುಕ್ತರು ತನಿಖೆಯ ನಂತರವೇ ಮತ್ತಷ್ಟು ಮಾಹಿತಿ ಲಭ್ಯವಾಗಬೇಕಿದೆ ಎಂದಿದ್ದಾರೆ.