ಕರ್ನಾಟಕ

karnataka

ETV Bharat / state

ಓವರ್​ಟೇಕ್​ ಭರದಲ್ಲಿ ಬಸ್​ಗಳ ಮುಖಾಮುಖಿ ಡಿಕ್ಕಿ - Kannada news

ಬಿಆರ್​ಟಿಎಸ್-ಚಿಗರಿ ಬಸ್​ಗಳೆರಡು ಮುಖಾಮುಖಿ ಡಿಕ್ಕಿಯಾಗಿದ್ದು, ಓವರ್​ಟೇಕ್​ ಭರದಲ್ಲಿ ಈ ಅವಘಡ ನಡೆದಿದೆ. ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಮುಖಾಮುಖಿ ಡಿಕ್ಕಿಯಾದ ಬಿಆರ್​ಟಿಎಸ್ ಬಸ್​​ ಹಾಗೂ ಚಿಗರಿ ಬಸ್​

By

Published : Feb 18, 2019, 5:34 PM IST

ಧಾರವಾಡ: ಬಿಆರ್​ಟಿಎಸ್-ಚಿಗರಿ ಬಸ್​ಗಳೆರಡು ಮುಖಾಮುಖಿ ಡಿಕ್ಕಿಯಾದ ಘಟನೆ ನಗರದ ಯಾಲಕ್ಕಿ ಶೆಟ್ಟರ ಕಾಲೋನಿ ಬಳಿ ನಡೆದಿದ್ದು, ಅದೃಷ್ಟವಶಾತ್​ ಯಾವುದೇ ಸಾವುನೋವಾಗಿಲ್ಲ.

ಮುಖಾಮುಖಿ ಡಿಕ್ಕಿಯಾದ ಬಿಆರ್​ಟಿಎಸ್ ಬಸ್​​ ಹಾಗೂ ಚಿಗರಿ ಬಸ್​

ಧಾರವಾಡದಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಬಸ್​ ಚಿಗರಿ ಬಸ್​ಅನ್ನು ಓವರ್​​ಟೇಕ್ ಮಾಡುವ ಭರದಲ್ಲಿ ಡಿಕ್ಕಿ ಹೊಡೆದಿದ್ದು, ಪಕ್ಕದಲ್ಲಿದ್ದ ಬ್ಯಾರಿಕೇಟರ್​ಗೂ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್​ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.ಘಟನೆಯಿಂದಾಗಿ ಬಿಆರ್​ಟಿಎಸ್ ರಸ್ತೆಯಲ್ಲಿ ಕೆಲ ಸಮಯಗಳ ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ABOUT THE AUTHOR

...view details