ಹುಬ್ಬಳ್ಳಿ: 9 ಎಕರೆ ಹೊಲವನ್ನು ಅಳತೆ ಮಾಡಿಕೊಡುವುದಕ್ಕೆ 15 ಸಾವಿರ ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಭೂ ಮಾಪನ ಇಲಾಖೆ ಸರ್ವೇಯರ್ ರಾಘವೇಂದ್ರ ಎಸ್. ಕುಲಕರ್ಣಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಲಂಚ ಪಡೆಯುತ್ತಿದ್ದ ಭೂ ಮಾಪನ ಇಲಾಖೆ ಸರ್ವೇಯರ್ ಎಸಿಬಿ ಬಲೆಗೆ - Avvv
9 ಎಕರೆ ಹೊಲವನ್ನು ಅಳತೆ ಮಾಡಿಕೊಡುವುದಕ್ಕೆ 15 ಸಾವಿರ ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಭೂ ಮಾಪನ ಇಲಾಖೆ ಸರ್ವೇಯರ್ ರೆಡ್ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
![ಲಂಚ ಪಡೆಯುತ್ತಿದ್ದ ಭೂ ಮಾಪನ ಇಲಾಖೆ ಸರ್ವೇಯರ್ ಎಸಿಬಿ ಬಲೆಗೆ](https://etvbharatimages.akamaized.net/etvbharat/prod-images/768-512-3464344-thumbnail-3x2-sow.jpg)
ಭೂ ಮಾಪನ ಇಲಾಖೆ ಸರ್ವೇಯರ್ ರಾಘವೇಂದ್ರ ಎಸ್. ಕುಲಕರ್ಣಿ
ಕುಂದಗೋಳ ತಾಲೂಕು ಶಿರೂರ ಗ್ರಾಮದ ಮಲ್ಲಿಕಾರ್ಜುನಗೌಡ ಭರಮಗೌಡ ಪಾಟೀಲ್ ಎಂಬುವರ ಅವರ 9 ಎಕರೆ ಜಮೀನನ್ನು ಅಳತೆ ಮಾಡಿಕೊಡುವುದಕ್ಕೆ ಸರ್ವೇಯರ್ 15 ಸಾವಿರ ಬೇಡಿಕೆ ಇಟ್ಟಿದ್ದರಂತೆ. ಈ ಲಂಚದ ಹಣವನ್ನು ಪಡೆಯುತ್ತಿರುವಾಗ ಎಸಿಬಿ ಅಧಿಕಾರಿಗಳು ಸರ್ವೇಯರ್ನನ್ನು ರೆಡ್ ಹ್ಯಾಡಾಗಿ ಹಿಡಿದಿದ್ದಾರೆ.
ಎಸಿಬಿ ಡಿವೈಎಸ್ಪಿ ವಿಜಯಕುಮಾರ್ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದ್ದು, ಲಂಚ ಪಡೆಯುತ್ತಿದ್ದ ಭೂ ಮಾಪನ ಇಲಾಖೆ ಸರ್ವೇಯರ್ ರಾಘವೇಂದ್ರ ಎಸ್. ಕುಲಕರ್ಣಿಯನ್ನ ವಶಕ್ಕೆ ಪಡೆಯಲಾಗಿದೆ.
TAGGED:
Avvv