ಹುಬ್ಬಳ್ಳಿ :ಮನಸ್ವಿನಿ ಯೋಜನೆಯ ಹಣ ಬಿಡುಗಡೆಗೆ 600 ರೂಪಾಯಿ ಬೇಡಿಕೆ ಇಟ್ಟಿದ್ದ ಕಂದಾಯ ನಿರೀಕ್ಷಕ ಎಸಿಬಿ ಬಲೆಗೆ ಬಿದ್ದಿದ್ದಾನೆ.
ಲಂಚಕ್ಕೆ ಬೇಡಿಕೆಯಿಟ್ಟ ಕಂದಾಯ ನಿರೀಕ್ಷಕ ಎಸಿಬಿ ಬಲೆಗೆ - ಕುಂದಗೋಳ ಕಂದಾಯ ನಿರೀಕ್ಷಕ ಬಂಧನ
ಮಹಿಳೆಯಿಂದ ಲಂಚ ಪಡೆಯುತ್ತಿದ್ದ ಕುಂದಗೋಳ ಕಂದಾಯ ನಿರೀಕ್ಷಕನನ್ನು ಬಂಧಿಸಲಾಗಿದೆ.
ಲಂಚಕ್ಕೆ ಬೇಡಿಕೆಯಿಟ್ಟ ಕಂದಾಯ ನಿರೀಕ್ಷಕ ಎಸಿಬಿ ಬಲೆಗೆ
ಓದಿ : ಫೇಕ್ ಫೇಸ್ಬುಕ್ ಐಡಿ; 14 ಲಕ್ಷ ರೂ. ದೋಚಿದ 'ಸುಶ್ಮಾ' !
ಕುಂದಗೋಳ ತಾಲೂಕು ಕಂದಾಯ ನಿರೀಕ್ಷಕ ಶಿವಾನಂದ ಶಿರಹಟ್ಟಿ ಎಸಿಬಿ ಬಲೆಗೆ ಬಿದ್ದ ಅಧಿಕಾರಿ. ಬೆಟದೂರಿನ ಮಹಿಳೆಯೊಬ್ಬರಿಗೆ ಮನಸ್ವಿನಿ ಯೋಜನೆಗಾಗಿ 600 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಈ ಕುರಿತಂತೆ ಮಹಿಳೆ ಎಸಿಬಿಗೆ ದೂರು ನೀಡಿದ್ದರು, ಈ ಹಿನ್ನೆಲೆ ಕಾರ್ಯಾಚರಣೆ ನಡೆಸಿದ ಎಸಿಬಿ ಡಿಎಸ್ಪಿ ವೇಣುಗೊಪಾಲ ನೇತೃತ್ವದ ತಂಡ ಮಹಿಳೆಯಿಂದ ಲಂಚ ಪಡೆಯುವಾಗ ಬಂಧಿಸಿದ್ದಾರೆ.