ಕರ್ನಾಟಕ

karnataka

ETV Bharat / state

ಎಸಿಬಿ ಬಲೆಗೆ ಬಿದ್ದ ಮಕ್ಕಳ‌ ರಕ್ಷಣಾ ಘಟಕದ ಸಾಂಸ್ಥಿಕ ರಕ್ಷಣಾಧಿಕಾರಿ - ಲಂಚ ಪಡೆಯುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ

ಧಾರವಾಡದಲ್ಲಿನ ಮಕ್ಕಳ ರಕ್ಷಣಾ ಘಟಕದ ಸಾಂಸ್ಥಿಕ ರಕ್ಷಣಾಧಿಕಾರಿ ಲಂಚ ಪಡೆಯುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಎಸಿಬಿ ದಾಳಿ
ಎಸಿಬಿ ದಾಳಿ

By

Published : Feb 1, 2020, 9:31 PM IST

ಧಾರವಾಡ:ನಗರದದ ಹಿಂದಿ ಪ್ರಚಾರ ಸಭಾ ಬಳಿ ಇರುವ ಮಕ್ಕಳ ರಕ್ಷಣಾ ಘಟಕದ ಸಾಂಸ್ಥಿಕ ರಕ್ಷಣಾಧಿಕಾರಿ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಸಾಂಸ್ಥಿಕ ರಕ್ಷಣಾ ಘಟಕದ ಅಧಿಕಾರಿ ನಿಂಗಪ್ಪ ಮಡಿವಾಳರ, ರಾಘವೇಂದ್ರ ಸಂಡೂರ ಎಂಬುವರಿಂದ ಹಣ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ.ಸಂಡೂರ ಎಂಬವವರ ಶಾಲ್ಮಲಾ‌ ಶಾಲೆಗೆ ಸಂಬಂಧಿಸಿ ಮಕ್ಕಳ ರಕ್ಷಣಾ ಘಟಕದಿಂದ ನೋಟಿಸ್ ನೀಡಲಾಗಿತ್ತು. ಈ ಹಿನ್ನೆಲೆ ಶಾಲ್ಮಲಾ ಶಾಲೆಯವರಿಂದ 35 ಸಾವಿರ ರೂ. ಹಣ ಪಡೆಯುವಾಗ ಖಚಿತ ಮಾಹಿತಿ ಮೇರೆಗೆ ಎಸಿಬಿ ಅಧಿಕಾರಿಗಳು ದಾಳಿ‌ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಡಿಎಸ್​ಪಿ ಬಿಸನಳ್ಳಿ ಹಾಗೂ ಇನ್ಸ್​​ಪೆಕ್ಟರ್ ಎಂ.ಜಿ.ಹಿರೇಮಠ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಈ‌ ಕುರಿತು ಎಸಿಬಿ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

TAGGED:

ABOUT THE AUTHOR

...view details