ಹುಬ್ಬಳ್ಳಿ: ಡ್ರಗ್ಸ್ ಮಾಫಿಯಾವನ್ನು ಬೇರು ಸಮೇತ ಕಿತ್ತೆಸೆದು ಸಮಾಜ ಹಾಗೂ ಸಾರ್ವಜನಿಕ ಹಿತ ಕಾಪಾಡಬೇಕು ಎಂದು ಆಗ್ರಹಿಸಿ ಎಬಿವಿಪಿ ವತಿಯಿಂದ ಪತ್ರ ಚಳವಳಿ ಮಾಡುವ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಯಿತು.
ಡ್ರಗ್ಸ್ ಮಾಫಿಯಾ ವಿರುದ್ಧ ಕ್ರಮಕ್ಕಾಗಿ ಪತ್ರ ಚಳವಳಿ - ಡ್ರಗ್ಸ್ ಮಾಫಿಯಾ
ಈ ಕೂಡಲೇ ಸೂಕ್ತ ತನಿಖೆ ಕೈಗೊಂಡು ಡ್ರಗ್ಸ್ ಮಾಫಿಯಾವನ್ನು ಬೇರು ಸಮೇತ ನಿರ್ನಾಮ ಮಾಡಬೇಕು ಎಂದು ಒತ್ತಾಯಿಸಿದರು..
![ಡ್ರಗ್ಸ್ ಮಾಫಿಯಾ ವಿರುದ್ಧ ಕ್ರಮಕ್ಕಾಗಿ ಪತ್ರ ಚಳವಳಿ ಪತ್ರ ಚಳವಳಿ](https://etvbharatimages.akamaized.net/etvbharat/prod-images/768-512-12:32:04:1601103724-kn-hbl-02-abvp-patra-chaluvali-av-7208089-26092020122821-2609f-1601103501-730.jpg)
ಪತ್ರ ಚಳವಳಿ
ಮಾದಕ ವಸ್ತುಗಳ ಬಳಕೆ ಎಲ್ಲಾ ಕ್ಷೇತ್ರಕ್ಕೂ ವ್ಯಾಪಿಸಿದೆ. ಹೆಚ್ಚಿನದಾಗಿ ವಿದ್ಯಾರ್ಥಿಗಳು ಇದಕ್ಕೆ ಬಲಿಯಾಗುತ್ತಿದ್ದಾರೆ. ಈ ಕೂಡಲೇ ಸೂಕ್ತ ತನಿಖೆ ಕೈಗೊಂಡು ಡ್ರಗ್ಸ್ ಮಾಫಿಯಾವನ್ನು ಬೇರು ಸಮೇತ ನಿರ್ನಾಮ ಮಾಡಬೇಕು ಎಂದು ಒತ್ತಾಯಿಸಿದರು.