ಹುಬ್ಬಳ್ಳಿ: ಡ್ರಗ್ಸ್ ಮಾಫಿಯಾದಿಂದ ಕಾಲೇಜುಗಳನ್ನು ರಕ್ಷಿಸಿಸುವಂತೆ ಮತ್ತು ಡ್ರಗ್ಸ್ ತನಿಖೆಯಲ್ಲಿ ತೊಡಗಿಕೊಂಡ ಪೊಲೀಸರಿಗೆ ಇನ್ನೂ ಹೆಚ್ಚಿನ ಅಧಿಕಾರವನ್ನು ನೀಡಬೇಕು ಎಂದು ಮನವಿ ಸಲ್ಲಿಸಲು ಹೋದ ಎಬಿವಿಪಿ ಕಾರ್ಯಕರ್ತತರಿಗೆ ಸ್ಪಂದಿಸದ ಪೊಲೀಸ್ ಕಮೀಷನರ್ ವಿರುದ್ಧ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಎಬಿವಿಪಿ ಸಂಘಟನೆ ಮನವಿ ಸ್ವೀಕರಿಸಲು ಪೊಲೀಸ್ ಕಮೀಷನರ್ ಹಿಂದೇಟು, ಕಚೇರಿ ಎದುರು ಹೈಡ್ರಾಮ
ಮನವಿ ಸಲ್ಲಿಸಲು ಹೋದ ಎಬಿವಿಪಿ ಕಾರ್ಯಕರ್ತತರಿಗೆ ಸ್ಪಂದಿಸದ ಪೊಲೀಸ್ ಕಮೀಷನರ್ ವಿರುದ್ಧ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಶಾಲಾ ಕಾಲೇಜುಗಳಲ್ಲಿ ಡ್ರಗ್ಸ್ ಹಾವಳಿ ತಪ್ಪಿಸಲು ಆಗ್ರಹಿಸಿ ಪೊಲೀಸ್ ಕಮೀಷನರೇಟ್ ಕಚೇರಿಗೆ ಮನವಿ ನೀಡಲು ಹೋದವರಿಗೆ ಪೊಲೀಸರು ಸ್ಪಂದಿಸಲಿಲ್ಲ. ವಿದ್ಯಾರ್ಥಿ ಸಂಘಟನೆ ಮನವಿ ಪಡೆಯಲು ಕಮೀಷನರ್ ಸೇರಿದಂತೆ ಯಾವ ಸಿಬ್ಬಂದಿಯೂ ಆಗಮಿಸಲಿಲ್ಲ. ಆಗ ಎಬಿವಿಪಿ ಕಾರ್ಯಕರ್ತರು ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಇದೇ ವೇಳೆ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ.
ಕೊನೆಗೆ ಮನವಿ ಸ್ವೀಕರಿಸಲು ಹೊರಗೆ ಬಾರದ ಕಾರಣದಿಂದ ಪೊಲೀಸ್ ಕಮಿಷನರ್ ಕುರ್ಚಿಗೆ ಮನವಿ ಕೊಟ್ಟು ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರು ಹೋರಾಟ ಮುಂದುವರಿಸಿದರು.
ಇಷ್ಟೆಲ್ಲಾ ಹೈ ಡ್ರಾಮಾ ನಡೆದ ನಂತರ ಎಚ್ಚೆತ್ತುಕೊಂಡ ಇನ್ನುಳಿದ ಕಿರಿಯ ಅಧಿಕಾರಿಗಳು ಹಿರಿಯ ಅಧಿಕಾರಿಗೆ ಮನವಿ ಸ್ವೀಕರಿಸುವಂತೆ ಒತ್ತಾಯಿಸಿದಾಗ ವಿದ್ಯಾರ್ಥಿಗಳ ಮನವಿ ಸ್ವೀಕರಿಸಿದ್ದಾರೆ.