ಹುಬ್ಬಳ್ಳಿ:ಕೊರೊನಾ ಸೋಂಕಿತ ಗರ್ಭಿಣಿಯ ಆರೋಗ್ಯದಲ್ಲಿ ಏರುಪೇರಾದ ಕಾರಣ ಗರ್ಭಪಾತ ಮಾಡಲು ವೈದ್ಯರ ತಂಡ ಚಿಂತನೆ ನಡೆಸಿದೆ ಎಂಬ ವಿಚಾರ ಗೊತ್ತಾಗಿದೆ.
ಕೊರೊನಾ ಸೋಂಕಿತ ಗರ್ಭಿಣಿ ಆರೋಗ್ಯದಲ್ಲಿ ಏರುಪೇರು; ಗರ್ಭಪಾತ ಮಾಡಲು ವೈದ್ಯರ ಸಿದ್ಧತೆ - ಗರ್ಭಿಣಿ
ಹುಬ್ಬಳ್ಳಿಯಲ್ಲಿ ಕೊರೊನಾ ಸೋಂಕು ತಗುಲಿದ್ದ ಗರ್ಭಿಣಿಯ ಆರೋಗ್ಯದಲ್ಲಿ ಏರುಪೇರು ಉಂಟಾದ ಕಾರಣ, ಆಕೆಯ ಪ್ರಾಣ ಉಳಿಸಲು ಗರ್ಭಪಾತ ಅನಿವಾರ್ಯವಾಗಿದೆ.
ಕಿಮ್ಸ್‌ನಲ್ಲಿ ಗದಗ ಜಿಲ್ಲೆಯ ರೋಣ ತಾಲೂಕಿನ ಕೃಷ್ಣಾಪುರ ಗ್ರಾಮದ 25 ವರ್ಷದ ಗರ್ಭಿಣಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಆಕೆಯ ಪ್ರಾಣ ರಕ್ಷಣೆಗೆ ಗರ್ಭಪಾತ ಮಾಡುವ ಅನಿವಾರ್ಯತೆ ಎದುರಾಗಿದೆ. ದಿನದಿಂದ ದಿನಕ್ಕೆ ಸೋಂಕಿತೆಯ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು, ಗರ್ಭಿಣಿಯನ್ನು ಬದುಕಿಸುವ ನಿಟ್ಟಿನಲ್ಲಿ ಗರ್ಭಪಾತ ಮಾಡಲೇಬೇಕಾಗಿದೆ ಎನ್ನಲಾಗಿದೆ. ಸೋಂಕಿತೆ 5 ತಿಂಗಳ ಗರ್ಭಿಣಿಯಾಗಿದ್ದು, ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ.
ಗರ್ಭಪಾತಕ್ಕೆ ಸಿದ್ಧತೆ:
ಕೊರೊನಾ ಸೋಂಕಿತೆ ಗರ್ಭಿಣಿಯ ಗರ್ಭಪಾತ ಹಲವು ಸವಾಲುಗಳನ್ನು ವೈದ್ಯರ ಮುಂದಿಟ್ಟಿದೆ. ಮುಂದಿನ ಎರಡು ದಿನದಲ್ಲಿ ನಡೆಯಬೇಕಿರುವ ವೈದ್ಯಕೀಯ ಪ್ರಕ್ರಿಯೆಗೆ ವೈದ್ಯರು ವಿಶೇಷ ತಂಡವನ್ನು ರಚಿಸಲಾಗಿದೆ. ಈ ತಂಡ ನುರಿತ ವೈದ್ಯರೊಂದಿಗೆ ಚಿಕಿತ್ಸೆಯ ಕುರಿತು ಸಮಾಲೋಚನೆ ನಡೆಸುತ್ತಿದೆ.