ಹುಬ್ಬಳ್ಳಿ: ದಿವಂಗತ ಅಂಬರೀಷ್ ಅವರ ಪುತ್ರ ಅಭಿಷೇಕ್ ಅಂಬರೀಷ್ ನಟನೆಯ ಅಮರ್ ಚಿತ್ರದ ಪ್ರಮೋಷನ್ಗಾಗಿ ಚಿತ್ರ ತಂಡ ಅವಳಿನಗರ ಹುಬ್ಬಳ್ಳಿಗೆ ಆಗಮಿಸಿತ್ತು. ಈ ವೇಳೆ ಬೆದರಿದ ಹೋರಿಯೊಂದು ಅಡ್ಡಾದಿಡ್ಡಿ ಓಡಿ ಆತಂಕ ಸೃಷ್ಟಿಸಿತ್ತು.
ಹುಬ್ಬಳ್ಳಿಗೆ ಬಂದ ಅಮರ್ ಚಿತ್ರತಂಡಕ್ಕೆ ಚಮಕ್ ನೀಡಿದ 'ಹೋರಿ' - ಹುಬ್ಬಳ್ಳಿ
ಅಭಿಷೇಕ್ ಅಂಬರೀಷ್ ಅಭಿನಯದ ಅಮರ್ ಚಿತ್ರದ ಪ್ರಮೋಷನ್ಗೆ ಆಗಮಿಸಿದ ಚಿತ್ರತಂಡಕ್ಕೆ ಹೋರಿಯೊಂದು ಚಮಕ್ ನೀಡಿದೆ.

ಅಮರ್ ಚಿತ್ರತಂಡಕ್ಕೆ ಚಮಕ್ ನೀಡಿದ 'ಹೋರಿ'
ನಗರದ ಚೆನ್ನಮ್ಮ ವೃತ್ತದಲ್ಲಿ ಚೆನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಲು ನಟ ಅಭಿಷೇಕ್ ಹಾಗೂ ಅಭಿಮಾನಿಗಳು ಜಮಾಯಿಸಿದ್ದರು. ಆ ಸಂದರ್ಭದಲ್ಲಿ ಎಂಟ್ರಿ ಕೊಟ್ಟ ಹೋರಿಯೊಂದು ಜನರ ಮಧ್ಯೆ ಚಿನ್ನಾಟ ಆರಂಭಿಸಿ ಕೆಲವರನ್ನು ಅಟ್ಟಿಸಿಕೊಂಡು ಹೋಯಿತು. ಅಷ್ಟೆ ಅಲ್ಲದೆ ಚೆನ್ನಮ್ಮ ಸರ್ಕಲ್ ಕಟ್ಟೆ ಏರಿ ಗುದ್ದಲು ಮುಂದಾಯಿತು. ಆಗ ಜನರು ಹೋರಿಯಿಂದ ತಪ್ಪಿಸಿಕೊಂಡು ಓಡಾಡಿದರು.
ಅಮರ್ ಚಿತ್ರತಂಡಕ್ಕೆ ಚಮಕ್ ನೀಡಿದ 'ಹೋರಿ'
ಘಟನೆಯಲ್ಲಿ ಅದೃಷ್ಟವಶಾತ್ ಯಾರಿಗೂ ಯಾವುದೇ ಹಾನಿಯಾಗಿಲ್ಲ. ಈ ಹೋರಿ ಕಳೆದ ಕೆಲ ದಿನಗಳ ಹಿಂದೆಯೂ ಇದೇ ರೀತಿ ಜನರನ್ನು ಓಡಿಸಿದೆ. ಇಂದು ಕೂಡ ಜನರನ್ನು ಅಟ್ಟಾಡಿಸಿದೆ. ಇದರಿಂದ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.